Virat Kohli: ಬೆಂಗಳೂರಿನ ವಿರಾಟ್‌ ಕೊಹ್ಲಿ ಒಡೆತನದ ಪಬ್‌ ಮೇಲೆ ಎಫ್‌ಐಆರ್‌ ದಾಖಲು

Share the Article

Virat Kohli: ಕ್ರಿಕೆಟಿಗ ವಿರಾಟ್‌ ಕೊಹ್ಲಿ ಒಡೆತನದ ದಿ ಒನ್‌ 8 ಕಮ್ಯೂನ್‌ ಪಬ್‌ ವಿರುದ್ಧ ಕಬ್ಬನ್‌ ಪಾರ್ಕ್‌ ಠಾಣೆಯ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿದ್ದಾರೆ.

ಮೇ 29 ರಂದು ಪಬ್‌ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಪಬ್‌ನಲ್ಲಿ ಧೂಮಪಾನಿಗಳಿಗೆ ಪ್ರತ್ಯೇಕವಾದ ಸ್ಮೋಕಿಂಗ್‌ ಝೋನ್‌ ಸ್ಥಳ ನಿರ್ಮಿಸದಿರುವ ಬ್‌ ವಿರುದ್ಧ ಎನ್‌ಸಿಆರ್‌ ದಾಖಲಿಸಿಕೊಂಡು ನೋಟಿಸ್‌ ನೀಡಲಾಗಿತ್ತು. ಈ ನಿಯಮವನ್ನು ಉಲ್ಲಂಘನೆ ಮಾಡಿ ಪಬ್‌ನಲ್ಲಿ ಧೂಮಪಾನಕ್ಕೆ ಅವಕಾಶ ನೀಡಿದ್ದಕ್ಕಾಗಿ ಕೋರ್ಟ್‌ ಅನುಮತಿ ನೀಡಿದ ಬಳಿಕ ಪಬ್‌ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಪಬ್‌ ಮ್ಯಾನೇಜರ್‌ ಹಾಗೂ ಸಿಬ್ಬಂದಿಯನ್ನು ಆರೋಪಿಗಳನ್ನಾಗಿ ಎಫ್‌ಐಆರ್‌ ದಾಖಲು ಮಾಡಲಾಗಿದೆ.

Comments are closed.