UIDAI: ಕೂಡಲೇ ಆಧಾರ್‌ ಕಾರ್ಡ್‌ ಅಪ್ಡೇಟ್‌ ಮಾಡಿ: ಜೂನ್‌ 14 ರ ನಂತರ ಬೀಳಲಿದೆ ಭಾರೀ ಶುಲ್ಕ

Share the Article

UIDAI: ಹಲವಾರು ಮುಖ್ಯವಾದ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಕೂಡ ಒಂದು. ಇದುವರೆಗೂ ಆಧಾರ್ ಅಪ್ಡೇಟ್ ಮಾಡಿಸಬೇಕಾದರೆ ಉಚಿತವಾಗಿ ಮಾಡಬಹುದಾಗಿತ್ತು. ಆದರೆ ಜೂನ್ 14 ರ ನಂತರ ಆಧಾರ್ ಅಪ್ಡೇಟ್ ಗೆ ಶುಲ್ಕ ಪಾವತಿಸಬೇಕಿದೆ.
ಆಧಾರ್ ಅಪ್‌ಡೇಟ್ ಮಾಡಲು ಬಾಕಿ ಇರುವವರು ಜೂನ್ 14ರ ವರೆಗೆ ಉಚಿತವಾಗಿ ಅಪ್‌ಡೇಟ್ ಮಾಡಲು ಸಮಯವಿದ್ದು, ಅನಂತರ ಶುಲ್ಕ ನೀಡಬೇಕು.

ಜೂನ್ 14 ರ ನಂತರ ಪ್ರತಿ ಅಪ್‌ಡೇಟ್‌ಗೆ 50 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಇದು ಯುನಿಕ್ ಐಂಡಿಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಕೇಂದ್ರಕ್ಕೆ ನೀಡುವಂತದ್ದು. ಆನ್‌ಲೈನ್ ಮೂಲಕ ಯಾರ ಸಹಾಯವೂ ಇಲ್ಲದೆ ಆಧಾರ್ ಅಪ್‌ಡೇಟ್ ಮಾಡಿದರೂ ಕೂಡ ಶುಲ್ಕ ಪಾವತಿಸಬೇಕು.

ಇನ್ನು ಬೆಂಗಳೂರು ಒನ್, ಗ್ರಾಮ ಒನ್ ಸೇರಿದಂತೆ ಇತರ ಸೈಬರ್ ಕೇಂದ್ರಗಲ್ಲಿ ಆಧಾರ್ ಅಪ್‌ಡೇಟ್ ಮಾಡಿದರೆ UIDAI ಶುಲ್ಕ 50 ರೂಪಾಯಿ ಹಾಗೂ ಕೆಲಸ ಮಾಡಿಕೊಟ್ಟ ಆಯಾ ಕೇಂದ್ರಗಳ ಚಾರ್ಜ್ ಪಾವತಿಸಬೇಕಾಗುತ್ತದೆ. ಹತ್ತು ವರ್ಷಗಳಿಗೊಮ್ಮೆ ಆಧಾರ್ ಅಪ್ಡೇಟ್ ಕಡ್ಡಾಯವಾಗಿದ್ದು, ಇವುಗಳಿಗೆ ಇನ್ಮುಂದೆ ಶುಲ್ಕವು ಕಡ್ಡಾಯವಾಗಿರುತ್ತದೆ.

Comments are closed.