Brahmaputra River: ಈ ನದಿ ವರ್ಷದಲ್ಲಿ 3 ದಿನ ಮುಟ್ಟಾಗುತ್ತಂತೆ: ಇಲ್ಲಿ ನಡಿಯುತ್ತೆ ದೇವಿಯ ಯೋನಿ ಪೂಜೆ

Share the Article

Assam:ಒಂದು ರೀತಿಯಲ್ಲಿ ಭಾರತವನ್ನು ನದಿಗಳ ತವರೂರು ಎನ್ನಬಹುದು, ಬಹಳಷ್ಟು ನ್ನಡಿಗಳು ಹರಿಯುವ ಪುಣ್ಯ ಸ್ಥಳ ಭಾರತ ದೇಶ. ಇಲ್ಲಿ ಪ್ರತಿಯೊಂದು ನದಿಗೂ ತನ್ನದೇ ಆದ ಮಹತ್ವ ಹಾಗೂ ಇತಿಹಾಸವಿದೆ.

ಇಂತಹ ನದಿಗಳಲ್ಲಿ ಬ್ರಹ್ಮಪುತ್ರ ಕೂಡ ಒಂದಾಗಿದ್ದು, ಇದು ಅಸ್ಸಾಮ್ ರಾಜ್ಯದಲ್ಲಿ ಹರಿಯುತ್ತದೆ. ನೀಲಾಚಲ್ ಪರ್ವತದ ಮೇಲೆ ಈ ನದಿಯ ದಡದಲ್ಲಿ ಕಾಮಾಕ್ಯ ದೇವಿಯ ದೇವಾಲಯವಿದ್ದು, ಈ ನದಿಯನ್ನು ಎಲ್ಲರೂ ಬಹಳ ಭಕ್ತಿಯಿಂದ ಪೂಜಿಸುತ್ತಾರೆ.

ಇನ್ನೂ ಪುರಾಣದ ಪ್ರಕಾರ, ಮಾತಾ ಸತಿಯ ಯೋನಿಯ ಒಂದು ಭಾಗವು ಈ ಸ್ಥಳದಲ್ಲಿ ಬಿದ್ದಿರುವುದರಿಂದ, ಅದನ್ನು ದೇವಾಲಯವಾಗಿ ಸ್ಥಾಪಿಸಲಾಯಿತು. ಹಾಗೂ ಈ ನದಿಯ ನೀರು ಕೆಲವು ದಿನಗಳವರೆಗೆ ಕೆಂಪು ಬಣ್ಣಕ್ಕೆ ತಿರುಗುತ್ತದೆಯಂತೆ ಮತ್ತು ಇದರ ಹಿಂದೆ ವಿಶೇಷ ಧಾರ್ಮಿಕ ನಂಬಿಕೆಗಳೂ ಕೂಡ ಇವೆ.

ಹಲವು ಸ್ಥಳಗಳಲ್ಲಿ, ಕಾಮಾಕ್ಯ ದೇವಿಯನ್ನು ‘ರಕ್ತ ಹರಿಯುವ ದೇವತೆ’ ಎಂದೂ ಕರೆಯುತ್ತಾರೆ. ಹಾಗೂ ದೇವಿಯ ಯೋನಿಯನ್ನು ಪೂಜಿಸುವ ಏಕೈಕ ದೇವಾಲಯ ಇದಾಗಿದ್ದು, ಈ ದೇವಾಲಯದಲ್ಲಿ ಯಾವುದೇ ವಿಗ್ರಹವನ್ನು ಸ್ಥಾಪಿಸಲಾಗಿಲ್ಲ. ನಂಬಿಕೆಗಳ ಪ್ರಕಾರ, ಕಾಮಾಕ್ಯ ದೇವಿಯು ವರ್ಷಕ್ಕೊಮ್ಮೆ ಇಲ್ಲಿ ಮುಟ್ಟಾಗುತ್ತಾಳಂತೆ. ಪ್ರತಿ ವರ್ಷ ಜೂನ್ ತಿಂಗಳಲ್ಲಿ, ಕಾಮಾಕ್ಯ ದೇವಿಯ ಮುಟ್ಟಿನ ರೂಪ ಕಾಣಿಸಿಕೊಳ್ಳುತ್ತದೆ, ಈ ಸಮಯದಲ್ಲಿ ಹರಿಯುವ ರಕ್ತದಿಂದಾಗಿ ಇಡೀ ಬ್ರಹ್ಮಪುತ್ರ ನದಿಯ ಬಣ್ಣವು ಕೆಂಪು ಬಣ್ಣಕ್ಕೆ ತಿರುಗುತ್ತದೆ. ತಾಯಿ ಮೂರು ದಿನಗಳ ಕಾಲ ಮುಟ್ಟಿನಲ್ಲಿರುತ್ತಾಳೆ ಹಾಗೂ ಈ ಸಮಯದಲ್ಲಿ ದೇವಾಲಯವನ್ನು ಮುಚ್ಚಲಾಗುತ್ತದೆ ಮತ್ತು ದರ್ಶನವನ್ನು ನಿಷೇಧಿಸಲಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

Comments are closed.