2000 Note: ಇನ್ನೂ ಚಲಾವಣೆಯಲ್ಲಿ 2000 ರೂ ನೋಟ್ : ಆರ್ ಬಿಐ ತಲುಪದ ನೋಟುಗಳು

Share the Article

2000 Note: ಆರ್‌ಬಿಐ 2 ಸಾವಿರ ರೂ ಮುಖ ಬೆಲೆಯ ನೋಟ್ ಗಳ ಚಲಾವಣೆಯನ್ನು ಅದನ್ನು ಬಳಕೆ ಬಂದ ವೇಗದಲ್ಲೆ ಅಮಾನೀಕರಣವನ್ನು ಮಾಡಿದೆ. ದೇಶದಲ್ಲಿ ಈ ₹2,000 ನೋಟುಗಳ ಅಮಾನೀಕರಣವಾಗಿ 2 ವರ್ಷಗಳು ಕಳೆದಿದೆ. ಆದ್ರೆ ಎಲ್ಲಾ ನೋಟುಗಳು ಮರಳಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ತಲುಪಲೇ ಇಲ್ಲ.

2 ಸಾವಿರ ರುಪಾಯಿ ನೋಟುಗಳ ಅಮಾನೀಕರಣದ ನಂತರವೂ, ಇದುವರೆಗೂ 98.26% ನೋಟುಗಳು ಮಾತ್ರ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ತಲುಪಿವೆ, ಉಳಿದ ಸಾವಿರಾರು ರೂಪಾಯಿ ಮೌಲ್ಯದ ನೋಟುಗಳು ಇನ್ನಷ್ಟೇ ರಿಸರ್ವ್ ಬ್ಯಾಂಕ್ ಗೆ ಬರಬೇಕಿದೆ ಎಂದು RBI ಹೇಳಿದೆ.

ಈ ಲೆಕ್ಕಾಚಾರದ ಪ್ರಕಾರ ಇನ್ನೂ ₹6,181 ಕೋಟಿ ಮೌಲ್ಯದ ₹2,000 ನೋಟುಗಳು ದೇಶದ ಒಳಗೆ ಚಲಾವಣೆಯಲ್ಲಿವೆ ಎಂದು RBI ಹೇಳಿದೆ. ಈಗಲೂ ಅವಕಾಶವಿದ್ದು ಅಂಚೆ ಕಚೇರಿಗಳಿಂದ RBIಗೆ ಅವುಗಳನ್ನು ಕಳುಹಿಸುವ ಮೂಲಕ ವಿನಿಮಯ ಮಾಡಿಕೊಳ್ಳಬಹುದು ಎಂದು RBI ತಿಳಿಸಿದೆ.

Comments are closed.