Cardiac Arrest: ಖ್ಯಾತ ಸಿನಿಮಾ ನಿರ್ದೇಶಕರಿಗೆ ಬಸ್ಸಿನಲ್ಲೇ ಹೃದಯಸ್ತಂಭನ: ನಿಧನ

Share the Article

Cardiac Arrest: ಚಲನಚಿತ್ರ ನಿರ್ದೇಶಕ ವಿಕ್ರಮ್‌ ಸುಗುಮಾರನ್‌ ಇಂದು (ಸೋಮವಾರ ಜೂ.2) ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಇವರಿಗೆ 47 ವರ್ಷ ವಯಸ್ಸಾಗಿತ್ತು.

ಮಧುರೈನಿಂದ ಚೆನ್ನೈಗೆ ತೆರಳುತ್ತಿದ್ದ ವೇಳೆ ಹೃದಯಸ್ತಂಭನ ಉಂಟಾಗಿದೆ ಎನ್ನಲಾಗಿದೆ. ಮಧುರೈನಿಂದ ಚೆನ್ನೈಗೆ ಬಸ್‌ ಹತ್ತಿದ ವಿಕ್ರಮ್‌ ಅವರಿಗೆ ಪ್ರಯಾಣದ ಮಧ್ಯೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ನಿಧನ ಹೊಂದಿದ್ದಾರೆ ಎಂದು ವರದಿಯಾಗಿದೆ.

Comments are closed.