Women Wombs: ಒಂದೇ ಜಿಲ್ಲೆಯ 800 ಕ್ಕೂ ಅಧಿಕ ಮಹಿಳೆಯರಿಂದ ಗರ್ಭಕೋಶ ತೆಗೆದುಹಾಕುವ ಶಸ್ತ್ರಚಿಕಿತ್ಸೆ: ಕಾರಣ?

Mumbai: ಮಹಾರಾಷ್ಟ್ರದ ಬೀದ್ ಜಿಲ್ಲೆಯಲ್ಲೊಂದು ಆಘಾತಕಾರಿ ಘಟನೆ ನಡೆದಿದ್ದು, ಕಬ್ಬಿನ ಕಟಾವು ಋತುವಿನ ಆರಂಭಕ್ಕೂ ಮುನ್ನ ಈ ಜಿಲ್ಲೆಯಿಂದ ಸುಮಾರು 1.75 ಲಕ್ಷ ಮಂದಿ ಕಾರ್ಮಿಕರು ಮಹಾರಾಷ್ಟ್ರದಿಂದ ಹೊರಗೆ ಹೋಗುತ್ತಾರೆ. ಇನ್ನು ಇವರ ಪೈಕಿ 78 ಸಾವಿರ ಜನ ಮಹಿಳೆಯರೂ ಇದ್ದಾರೆ.

ಇತ್ತೀಚೆಗಿನ ಸಮೀಕ್ಷೆ ಪ್ರಕಾರ ಈ ಕಟಾವಿಗೆ ಹೋಗುವ 877 ಮಂದಿ ಮಹಿಳೆಯರು ತಮ್ಮ ಗರ್ಭಕೋಶ ತೆಗೆಸಿದ್ದಾರೆ ಎಂಬ ಅಂಶ ತಿಳಿದು ಬಂದಿದೆ. ಇದರಲ್ಲಿ 30-35 ವರ್ಷದವರೆಗಿನ ಮಹಿಳೆಯರೇ ಹೆಚ್ಚಾಗಿದ್ದು, ಮುಟ್ಟಿನ ಸಮಯದಲ್ಲಿ ಉಂಟಾಗುವ ಹೊಟ್ಟೆನೋವು, ತೀವ್ರ ರಕ್ತಸ್ರಾವದಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಆರ್ಥಿಕ ಕಾರಣದಿಂದಾಡಿ ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ 1523 ಮಹಿಳೆಯರು ಗರ್ಭ ಧರಿಸಿರುವ ಸಮಯದಲ್ಲಿ ಕೂಡ ಕಟಾವಿನ ಕೆಲಸ ಮಾಡುತ್ತಿದ್ದು, ಈ ಮಹಿಳೆಯರ ಮಾಹಿತಿಯನ್ನು ಮಾತೃ ಮತ್ತು ಶಿಶು ಆರೈಕೆ ಪೋರ್ಟಲ್ನಲ್ಲಿ ದಾಖಲಿಸಲಾಗಿದ್ದು, ಹಲವಾರು ತಪಾಸನೆಗಳನ್ನು ಮಾಡಿರುತ್ತಾರೆ. ತಪಾಸಣೆಗಳು ಮತ್ತು ಅಂಕಿಅಂಶಗಳು ಕಬ್ಬಿನ ಕಟಾವು ಕಾರ್ಮಿಕ ಮಹಿಳೆಯರ ಆರೋಗ್ಯದ ಮೇಲೆ ಎಷ್ಟು ಗಂಭೀರ ಪರಿಣಾಮ ಬೀರುತ್ತಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ಹಾಗೂ ಇದಕ್ಕೆ ದೀರ್ಘಾವಧಿಯ ಪರಿಹಾರಗಳ ಅಗತ್ಯವಿದೆ ಎಂದು ದಾಖಲೆಗಳು ಹೇಳುತ್ತವೆ.
Comments are closed.