KMF: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ: 18 ರೀತಿಯ ನಂದಿನಿ ಕೇಕ್ ಹಾಗೂ ಮಫಿನ್ ಗಳು

Bengaluru: ಜೂನ್ 1 ರಂದು ವಿಶ್ವ ಹಾಲು ದಿನಾಚರಣೆಯ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರ ಹಾಲು ಮಹಾಮಂಡಲಿಯು 11 ರೀತಿಯ ವಿವಿಧ ನಂದಿನಿ ಕೇಕ್ ಹಾಗೂ ಮಫಿನ್ ಗಳನ್ನು ಬಿಡುಗಡೆ ಮಾಡಿದೆ.

ಇದು ಮಾರುಕಟ್ಟೆಯ ಎಲ್ಲ ಕೇಕ್ ಗಳಿಗಿಂತಲು ಉನ್ನತ ಗುಣಮಟ್ಟದ್ದು ಹಾಗೂ ಸ್ಪರ್ಧಾತ್ಮಕ ಬೆಲೆಯಲ್ಲಿ ದೊರೆಯಲಿವೆ.
ಈಗಾಗಲೇ ವಿವಿಧ ರೀತಿಯ ಸಿಹಿ ತಿನಿಸುಗಳು ನಂದಿನಿಯಲ್ಲಿ ಲಭ್ಯವಿದ್ದು, ಈಗ ಹೊಸ ಮಾದರಿಯ ಕೇಕ್ ಸಿಗಲಿದೆ. ಇದರಲ್ಲಿ ವೆನಿಲ್ಲಾ, ಚಾಕೊಲೇಟ್, ಪೈನಾಪಲ್, ಸ್ಟ್ರಾಬೆರಿ ಮತ್ತು ಮಾವಾ ಎಂಬ ಐದು ವಿಶಿಷ್ಟ ರುಚಿಗಳ ಕಪ್ ಕೇಕ್‌ಗಳನ್ನು ಬಿಡುಗಡೆ ಮಾಡಲಾಗಿದ್ದು, ಎಲ್ಲವೂ 150 ಗ್ರಾಂ. ತೂಕದ ಪೊಟ್ಟಣಗಳಲ್ಲಿ ಲಭ್ಯವಾಗುತ್ತವೆ.
ಸ್ಪಾಂಜಿ ವೆನಿಲ್ಲಾ ಕೇಕ್ 25 ಗ್ರಾಂ ಗೆ ರೂ.10, ಫ್ರೂಟಿ ಸ್ಲೈಸ್ ಕೇಕ್ 30 ಗ್ರಾಂಗೆ ರೂ.5, ಚಾಕೋ ಕಿತ್ತಲೆ ಸ್ಲೈಸ್ ಕೇಕ್, ವೆನಿಲ್ಲಾ ಸ್ಲೈಸ್ ಕೇಕ್, ಅನಾನಸ್ ಸ್ಲೈಸ್ ಕೇಕ್ 50 ಗ್ರಾಂ ಗೆ ರೂ.15ರಿಂದ 20, ವೆನಿಲ್ಲಾ ಮಫಿನ್, ಚಾಕಲೇಟ್ ಮಫಿನ್, ಅನಾನಸ್ ಮಫಿನ್, ಸ್ಟ್ರಾಬೆರಿ ಮಫಿನ್, ಮಾವಾ ಮಫಿನ್ 150 ಗ್ರಾಂ ಗೆ ರೂ.50, ಪ್ಲಮ್ ಕೇಕ್, ಚಾಕೋ ವೆನಿಲ್ಲಾ ಕೇಕ್ , ಫ್ರೂಟ್ ಕೇಕ್, ವೆನಿಲ್ಲಾ ಕೇಕ್, ಚಾಕೊಲೇಟ್ ಕೇಕ್, ವಾಲ್ನಟ್ ಬನಾನಾ ಕೇಕ್, ಚಾಕಲೆಟ್ ಬೆಲ್ಲದ ಕೇಕ್ ಹಾಗೂ ಕೊಬ್ಬರಿ ಬೆಲ್ಲದ ಕೇಕ್ 200 ಗ್ರಾಂಗೆ ರೂ.110 ದರವನ್ನು ನಿಗದಿಪಡಿಸಲಾಗಿದ್ದು, ಇವು ರಾಜ್ಯದ ಎಲ್ಲ ನಂದಿನಿ ಮಳಿಗೆಗಳಲ್ಲೂ ದೊರೆಯಲಿವೆ.
Comments are closed.