White hairs: ಕೂದಲು ಅತಿ ಚಿಕ್ಕ ವಯಸ್ಸಿಗೆ ಬಿಳಿಯಾಗುತ್ತಿದೆಯೇ?: ಇಲ್ಲಿದೆ ನೈಸರ್ಗಿಕವಾದ ಶಾಶ್ವತ ಪರಿಹಾರ

Share the Article

Home Remedies: ಇತ್ತೀಚೆಗೆ ಕೂದಲು ಅತಿ ಬೇಗನೆ ಬಿಳಿಯಾಗುವ ಸಮಸ್ಯೆಗಳು ಹೆಚ್ಚಾಗುತ್ತಿವೆ, ಚಿಕ್ಕ ಮಕ್ಕಳಲ್ಲೂ ಈ ರೀತಿಯ ಸಮಸ್ಯೆ ಉಂಟಾಗುತ್ತಿರುವುದು ಅಚ್ಚರಿಯ ಸಂಗತಿ.

ಹಾಗೂ ಇದನ್ನು ನಾವು ಹಲವಾರು ವಸ್ತುಗಳನ್ನು ಬಳಸುತ್ತೇವೆ, ಆದರೆ ಅದರಲ್ಲಿ ಬಳಕೆಯಾಗುವ ರಾಸಾಯನಿಕಗಳು ಮತ್ತಷ್ಟು ಹಾನಿಮಾಡುವ ಸಾಧ್ಯತೆಗಳಿವೆ. ಆದರೆ ನೈಸರ್ಗಿಕ ವಸ್ತುಗಳನ್ನು ಬಳಕೆ ಮಾಡುವುದರಿಂದ ಈ ಸಮಸ್ಯೆಯನ್ನು ಬುದ ಸಮೇತ ಕಿತ್ತುಹಾಕಬಹುದಾಗಿದೆ.

ಬಿಳಿ ಕೂದಲಿಗೆ ಎಳ್ಳೆಣ್ಣೆ ಬಳಸುವುದರಿಂದ ಕೂದಲನ್ನು ಕಪ್ಪಾಗಿಸಬಹುದಾಗಿದೆ, ಇದು ಅನೇಕ ಪೋಷಕಾಂಶಗಳನ್ನು ಹೊಂದಿರುವುದರಿಂದ ಕೂದಲಿಗೆ ಹೊಳಪು ನೀಡಿ ದಷ್ಟಪುಷ್ಟವಾಗಿ ಬೆಳೆಯುವಂತೆ ಮಾಡುತ್ತದೆ. ಇನ್ನೂ ಕರಿಬೇವಿನ ಪುಡಿ ಅಥವಾ ಎಲೆಯನ್ನು ಎಳ್ಳೆಣ್ಣೆಯೊಂದಿಗೆ ಬೆರೆಸಿ ಹಚ್ಚುವುದರಿಂದ ಕಪ್ಪಾಗುವ ಜೊತೆಗೆ ಕೂದಲು ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ ಹಾಗೂ ಇದನ್ನು ವಾರಕ್ಕೆ 2 ಬಾರಿ ಹಚ್ಚುವುದರಿಂದ ಕೂದಲು ಬಲವಾಗುತ್ತದೆ.

ಇನ್ನೂ ಒಂದು ಕಪ್ ಎಳ್ಳಿನ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ 1 ಚಮಚ ಗೋರಂಟಿ ಪುಡಿ ಅಥವಾ ಗೋರಂಟಿ ಎಲೆಗಳನ್ನು ಸೇರಿಸಿ ಚೆನ್ನಾಗಿ ಬಿಸಿ ಮಾಡಿ. ನಂತರ ಈ ಎಣ್ಣೆಯನ್ನು ನಿಮ್ಮ ಕೂದಲಿಗೆ ವಾರಕ್ಕೆ ಎರಡು ಬಾರಿ ಹಚ್ಚುವುದರಿಂದ ಹಾಗೂ ಈ ರೀತಿಯಾಗಿ ನಿಮ್ಮ ಕೂದಲಿಗೆ ಈ ಎಣ್ಣೆಯನ್ನು ನಿಯಮಿತವಾಗಿ ಹಚ್ಚಿಕೊಳ್ಳುವದರಿಂದ ಕ್ರಮೇಣ ನಿಮ್ಮ ಕೂದಲು ಕಪ್ಪಾಗುತ್ತದೆ.

Comments are closed.