Indigo: ಭಾರೀ ಬಿರುಗಾಳಿಗೆ ಸಿಲುಕಿ ನಿಯಂತ್ರಣ ಕಳೆದುಕೊಂಡ ‘ಇಂಡಿಗೊ ವಿಮಾನ’- ಭಯಾನಕ ವಿಡಿಯೋ ವೈರಲ್ !!

Indigo: ಇಂಡಿಗೋ ವಿಮಾನ ಬಂದು ಬಿರುಗಾಳಿಗೆ ಸಿಲುಕಿ ನಲುಗಿರುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಈ ಕುರಿತಾದ ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

#WATCH | An IndiGo flight number 6E 6313 from Raipur to Delhi experienced turbulence due to a duststorm, prompting the pilot to climb up again when the aircraft was about to touch down at Delhi airport. The aircraft landed safely at Delhi airport after making many circuits in the… pic.twitter.com/TtDUwIH79b
— ANI (@ANI) June 1, 2025
ಹೌದು, ಜೈಪುರ್-ದೆಹಲಿ ನಡುವಿನ ಇಂಡಿಗೋ ವಿಮಾನ ಟರ್ಬುಲೆನ್ಸ್ ಹೊಡೆತಕ್ಕೆ ಸಿಲುಕಿ ನಿಯಂತ್ರಣ ಕಳೆದುಕೊಂಡ ಘಟನೆ ನಡೆದಿದೆ. ಪ್ರಯಾಣಿಕರನ್ನು ಹೊತ್ತು ಸಾಗಿದ ಇಂಡಿಗೋ ವಿಮಾನ 6E 6313 ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನೇನು ಲ್ಯಾಂಡ್ ಆಗಬೇಕು ಅನ್ನುಷ್ಟರಲ್ಲೇ ಟರ್ಬುಲೆನ್ಸ್ಗೆ ಸಿಲುಕಿದೆ.
ಅಂದಹಾಗೆ ಭಾನುವಾರ ಸಂಜೆ ದೆಹಲಿ NCR ನಲ್ಲಿ ಭಾರೀ ಬಿರುಗಾಳಿ ಮತ್ತು ಮಳೆಯಿಂದಾಗಿ ಹವಾಮಾನ ಬದಲಾಯಿತು. ಭಾನುವಾರದಂದು ಪಾಲಂ ಪ್ರದೇಶದಲ್ಲಿ ಪ್ರಬಲವಾದ ಚಂಡಮಾರುತ ಕಂಡುಬಂದಿದೆ. ಪಾಲಂ ಪ್ರದೇಶದಲ್ಲಿ ಗಂಟೆಗೆ 96 ಕಿ.ಮೀ ವೇಗದಲ್ಲಿ ಚಂಡಮಾರುತ ಬೀಸಿತು. ಈ ವೇಳೆ ಭಾರಿ ಪ್ರಮಾಣದ ಗಾಳಿ ಮಳೆಯಿಂದ ವಿಮಾನ ಲ್ಯಾಡಿಂಗ್ ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ವಿಮಾನ ನಿಯಂತ್ರಕ್ಕೆ ಸಿಗದೆ ತೇಲಾಡಿದೆ. ಇತ್ತ ಪ್ರಯಾಣಿಕರು ತೀವ್ರ ಆತಂಕದ ಪರಿಸ್ಥಿತಿ ಎದುರಿಸಿದ್ದಾರೆ. ಪ್ರಯಾಣಿಕರು ಚೀರಾಡುತ್ತಿರುವ ದೃಶ್ಯ, ಪ್ರಾರ್ಥಿಸುತ್ತಿರುವ ದೃಶ್ಯ ಸೆರೆಯಾಗಿದೆ.
ಇನ್ನು ಹವಾಮಾನ ಇಲಾಖೆ ಹಂಚಿಕೊಂಡ ಇತ್ತೀಚಿನ ಮಾಹಿತಿಯ ಪ್ರಕಾರ, ಪಾಲಂ ಪ್ರದೇಶದಲ್ಲಿ ಬಿರುಗಾಳಿಯ ಗಾಳಿಯ ವೇಗ ಗಂಟೆಗೆ 96 ಕಿ.ಮೀ. ದಾಖಲಾಗಿದೆ. ಪ್ರಗತಿ ಮೈದಾನದಲ್ಲಿ ಗರಿಷ್ಠ ಗಾಳಿಯ ವೇಗ 81 ಕಿ.ಮೀ. ಮತ್ತು ಸಫ್ದರ್ಜಂಗ್ನಲ್ಲಿ ಅದು ಗಂಟೆಗೆ 80 ಕಿ.ಮೀ. ಇತ್ತು. ಭಾನುವಾರ ಬಂದ ಚಂಡಮಾರುತವು ಕಳೆದ 30 ದಿನಗಳಲ್ಲಿ ಅತ್ಯಂತ ಪ್ರಬಲವಾಗಿತ್ತು. ಇದಕ್ಕೂ ಮೊದಲು, ಮೇ 25 ರಂದು ಗಾಳಿಯ ವೇಗ ಗಂಟೆಗೆ 82 ಕಿ.ಮೀ. ದಾಖಲಾಗಿತ್ತು. ಹಿಂದಿನ ವರದಿಗಳಲ್ಲಿ, ಗಾಳಿಯ ವೇಗ ಸ್ವಲ್ಪ ಕಡಿಮೆ ಎಂದು ವರದಿಯಾಗಿದೆ.
Comments are closed.