Bengaluru: ಆಟೊ ಚಾಲಕನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಚಪ್ಪಲಿಯಲ್ಲಿ ಹೊಡೆದಿದ್ದ ಹಿಂದಿ ಯುವತಿ- ವಿಡಿಯೊ ವೈರಲ್

Share the Article

Bengaluru : ಆಟೋರಿಕ್ಷಾ ಚಾಲಕನಿಗೆ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿ ದರ್ಪ ತೋರಿದ್ದ ಯುವತಿಯು ಪೊಲೀಸ್ ನೋಟಿಸ್ ಬಳಿಕ ರವಿವಾರ ಬೆಳ್ಳಂದೂರು ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿ ತಪ್ಪೊಪ್ಪಿಕೊಂಡಿದ್ದಳು. ಅಲ್ಲದೆ ಇದೀಗ ಈ ಯುವತಿ ಆಟೊ ಚಾಲಕನ ಕಾಲಿಗೆ ನಮಸ್ಕರಿಸಿ ಕ್ಷಮೆಯಾಚಿಸಿದ್ದಾರೆ.

ಹೌದು, ಬೆಂಗಳೂರಿನಲ್ಲಿ ಸ್ಕೂಟಿಗೆ ಮಿಸ್ ಆಗಿ ಆಟೊ ಟಚ್ ಆಯ್ತು ಎಂದ ಕಾರಣಕ್ಕೆ ಉತ್ತರ ಭಾರತದ ಮಹಿಳೆಯೊಬ್ಬಳು ಬೆಂಗಳೂರಿನ ಆಟೋ ಚಾಲಕನಿಗೆ ನಡು ರಸ್ತೆಯಲ್ಲಿ ಚಪ್ಪಲಿಯಲ್ಲಿ ಹೊಡೆದಿದ್ದಳು. ಮಹಿಳೆ ಆಟೊ ಚಾಲಕನಿಗೆ ಚಪ್ಪಲಿಯಿಂದ ಬಾರಿಸುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ಮತ್ತೊಮ್ಮೆ ಉತ್ತರ ಭಾರತೀಯರ ದರ್ಪ ಎಂಬ ಆಕ್ರೋಶ ಕೇಳಿಬಂದಿತ್ತು.

ಈ ಘಟನೆಯನ್ನು ಖಂಡಿಸಿದ ಕನ್ನಡ ಪರ ಹೋರಾಟಗಾರರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ಕಿಡಿಕಾರಿದ್ದರು. ಈ ಸಂಬಂಧ ಬೆಳ್ಳಂದೂರು ಪೊಲೀಸ್‌ ಠಾಣೆಯಲ್ಲಿ ದೂರನ್ನು ಸಹ ದಾಖಲಿಸಿದ್ದರು. ಈ ಬೆನ್ನಲ್ಲೇ ಯುವತಿಯು ಆಟೊ ಚಾಲಕನ ಕಾಲಿಗೆ ನಮಸ್ಕರಿಸಿ ಕ್ಷಮೆಯಾಚಿಸಿದ್ದಾರೆ. ಕನ್ನಡಪರ ಸಂಘಟನೆಗಳ ಸಮ್ಮುಖದಲ್ಲಿ ತಾನು ಮಾಡಿದ್ದು ತಪ್ಪು ಎಂದು ಮಹಿಳೆ ಕ್ಷಮಾಪಣೆ ಕೋರಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Comments are closed.