Dakshina Kannada: ಮಹೇಶ್‌ ಶೆಟ್ಟಿ ತಿಮರೋಡಿ ಸಹಿತ ಜಿಲ್ಲೆಯ 36 ಮಂದಿ ಗಡಿಪಾರು ಲಿಸ್ಟ್‌ನಲ್ಲಿ

Share the Article

Dakshina Kannada: ಜಿಲ್ಲೆಯಾದ್ಯಂತ ಒಟ್ಟು 36 ಮಂದಿಯನ್ನು ಗಡಿಪಾರು ಮಾಡುವ ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ವರದಿಯಾಗಿದೆ.

ಕಡಲತಡಿ ಮಂಗಳೂರು ಈಗ ಸಾಲು ಸಾಲು ಹತ್ಯೆಗಳಿಂದ ಬೆಂದು ಹೋಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಈಗಾಗಲೇ ಕಲ್ಲಡ್ಕ ಪ್ರಭಾಕರ್‌ ಭಟ್‌ ಸೇರಿ 15 ಮಂದಿ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದು, ಜೊತೆ ಅರುಣ್‌ ಕುಮಾರ್‌ ಪುತ್ತಿಲ ಅವರಿಗೆ ಕಲಬುರಗಿಯ ಶಹಾಬಾದ್‌ಗೆ ಗಡಿಪಾರು ಮಾಡಿ ನೋಟಿಸ್‌ ನೀಡಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ಜೊತೆಗೆ ಇದೀಗ ಮಹೇಶ್‌ ಶೆಟ್ಟಿ ತಿಮರೋಡಿ ಸಹಿತ 35 ಮಂದಿಯನ್ನು ಗಡಿಪಾರು ಮಾಡುವ ಕುರಿತು ಪೊಲೀಸ್‌ ಇಲಾಖೆ ಕಾನೂನು ಪ್ರಕ್ರಿಯೆ ಆರಂಭಿಸಿದೆ ಎನ್ನಲಾಗಿದೆ.

ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಆರೋಪ ಹೊತ್ತಿರುವ ಒಟ್ಟು 36 ವ್ಯಕ್ತಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡು ಕಾನೂನು ಪ್ರಕ್ರಿಯೆ ಆರಂಭ ಮಾಡಿರುವುದಾಗಿ ಇಲಾಖೆ ಅಧಿಕೃತವಾಗಿ ಪ್ರಕಟ ಮಾಡಿದೆ.

ಲಿಸ್ಟ್‌ನಲ್ಲಿ ಗಡೀಪಾರಾಗುವ ವ್ಯಕ್ತಿಗಳ ಹೆಸರು ಇಂತಿದೆ:

 

Comments are closed.