Bharat Zen AI: ಭಾರತ್ ಜೆನ್ ಎಐ ಅನಾವರಣ- ಭಾರತೀಯ ಭಾಷೆಗಳ ಮೇಲೆ ಹೊಸ ಕ್ರಾಂತಿ

Share the Article

Bharat Zen AI: ವಿಜ್ಞಾನ ಕ್ಷೇತ್ರದಲ್ಲಿ ಎಐ ಹೊಸ ಕ್ರಾಮಕತಿಯನ್ನು ದಿನೇ ದಿನರೆ ಸೃಷ್ಟಿಸುತ್ತಿದೆ. ಇದೀಗ ಭಾರತ್ ಜೆನ್‌ನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅನಾವರಣಗೊಳಿಸಿದ್ದಾರೆ. ಇದು ಭಾರತೀಯ ಭಾಷೆಗಳಿಗೆಂದೇ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಎಐ ಆಧಾರಿತ ಮಲ್ಟಿಮೋಡಲ್ ಲಾರ್ಜ್ ಲ್ಯಾಂಗ್ಲೆಜ್‌ ಮಾಡೆಲ್.

NM-ICPS ಅಡಿಯಲ್ಲಿ IIT ಬಾಂಬೆಯ ವಿದ್ಯಾರ್ಥಿಗಳು ‘ಭಾರತ್‌ ಜೆನ್‌’ನ್ನು ತಯಾರಿಸಿದ್ದು, ಭಾರತದ ಭಾಷಾ ಮತ್ತು ಸಂಸ್ಕೃತಿಯಲ್ಲಿ AI ಕ್ರಾಂತಿ ಮಾಡುತ್ತದೆ ಎಂದು ಎಂದು ಜಿತೇಂದ್ರ ಸಿಂಗ್ ಹೇಳಿದರು.

ಭಾರತ್ ಜೆನ್ ಸಹಾಯದಿಂದ 22 ಭಾರತೀಯ ಭಾಷೆಗಳ ಬಗ್ಗೆ ತಿಳಿದುಕೊಳ್ಳಬಹುದು. ಇದರಿಂದ ಆರೋಗ್ಯ ರಕ್ಷಣೆ, ಶಿಕ್ಷಣ, ಕೃಷಿ ಕ್ಷೇತ್ರಗಳಲ್ಲಿ ಹಲವು ಅವಕಾಶಗಳು ತೆರೆದುಕೊಳ್ಳಲಿವೆ. ಪ್ರತಿಯೊಬ್ಬ ಭಾರತೀಯನನ್ನು ಅರ್ಥಮಾಡಿಕೊಳ್ಳುವ ಮತ್ತು ಆತನಿಗೆ ಸಹಾಯ ಮಾಡಲು AI ಸಹಕಾರಿಯಾಗಿದೆ ಎಂದು ಸಿಂಗ್ ಹೇಳಿದ್ದಾರೆ.

ಜಿತೇಂದ್ರ ಸಿಂಗ್ ತಮ್ಮ ಕ್ಷೇತ್ರ ಉದಂಪುರದಲ್ಲೇ ನಡೆದ ಒಂದು ಘಟನೆ ಬಗ್ಗೆ ವಿವರಿಸಿದ್ದಾರೆ. ಎಐ ಡಾಕ್ಟರ್ ಮೂಲಕ ರೋಗಿಯ ಆರೋಗ್ಯದಲ್ಲಿ ಸುಧಾರಣೆ ತರಲಾಯಿತು ಎಂದು ಸಿಂಗ್‌ ಹೇಳಿದ್ದಾರೆ.

ದೇಶದ ಕೆಲ ಪ್ರದೇಶಗಳಲ್ಲಿ ಇಂದಿಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಲ್ಲ. ಅಂಥಾ ಕಡೆ ಎಐ ಡಾಕ್ಟರ ಸಹಕಾರಿಯಾಗಲಿದೆ. ಭವಿಷ್ಯದಲ್ಲಿ ‘ಭಾರತ್ ಜೆನ್ ಕ್ರಾಂತಿ ಮಾಡಲಿದೆ ಎಂದು ಜಿತೇಂದ್ರ ಸಿಂಗ್ ಮಾಹಿತಿ‌ ನೀಡಿದರು.

Comments are closed.