M P Renukacharya: ಅರುಣ್ ಪುತ್ತಿಲ ಗಡಿಪಾರು: ಆದೇಶ ಹಿಂಪಡೆಯದಿದ್ದರೆ ಹೋರಾಟ ಮಾಡುತ್ತೇವೆ: ಎಚ್ಚರಿಸಿದ ರೇಣುಕಾಚಾರ್ಯ

Share the Article

M P Renukacharya: ಇತ್ತೀಚೆಗೆ ಕೊಲೆಯಾದಂತಹ ಸುಹಾಸ್ ಶೆಟ್ಟಿ ಶ್ರದ್ಧಾಂಜಲಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಕಲ್ಲಡ್ಕ ಪ್ರಭಾಕರ್ ಶೆಟ್ಟಿ ಸೇರಿದಂತೆ 15 ಜನರ ಮೇಲೆ FIR ದಾಖಲಿಸಲಾಗಿದ್ದು, ಅರುಣ್ ಪುತ್ತಿಲ ಅವರನ್ನು ಗಡಿಪಾರು ಮಾಡಿ ಎಂದು ಸರ್ಕಾರವು ಆದೇಶಿಸಿದೆ.

ಅಬ್ದುಲ್ ರೆಹಮಾನ್ ಸಾವಿನ ಸಂದರ್ಭದಲ್ಲಿ ಬೇರೆಯವರು ಎಷ್ಟು ಮಾತನಾಡಿದರೂ ಕೂಡ, ಹಾಗೂ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದಾಗಲು ಕೂಡ ದೂರು ದಾಖಲಿಸದ ಕಾಂಗ್ರೆಸ್ ಈಗ ಮಾಡಿರುವುದು ತಪ್ಪು, ಈ ನಡೆಯನ್ನು ಹಿಂಪಡೆಯದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸಚಿವ ಎಂ. ಪಿ. ರೇಣುಕಾಚಾರ್ಯ ಎಚ್ಚರಿಸಿದ್ದಾರೆ

ಕಾಂಗ್ರೆಸ್ ಒಂದು ಆಲಿಬಾಬ ಚಾಲೀಸ್ ಚೋರ್ ಸರ್ಕಾರವಾಗಿದ್ದು, ಭ್ರಷ್ಟಾಚಾರವನ್ನು ಪೋಷಿಸುತ್ತಿದೆ. ಇದೀಗ ವಸತಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಸುತ್ತಿದ್ದು, ಯಾವುದೇ ರೀತಿಯಲ್ಲೂ ಅಭಿವೃದ್ಧಿ ಮಾಡುವುದಿಲ್ಲ ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

Comments are closed.