Capsicum: ದೊಣ್ಣೆ ಮೆಣಸಿನಕಾಯಿ ಒಳಗಿಂದ ಹೊರಬಂತು ಜೀವಂತ ಚೇಳು!! ಇಲ್ಲಿದೆ ಶಾಕಿಂಗ್ ವಿಡಿಯೋ

Capsicum: ಮನೆಯಲ್ಲಿ ತರಕಾರಿ ಕಟ್ ಮಾಡುತ್ತಿದ್ದ ವೇಳೆ ದೊಣ್ಣೆ ಮೆಣಸಿನಕಾಯಿಯಲ್ಲಿ ಜೀವಂತ ಚೇಳು ಹೊರಬಂದಂತಹ ವಿಚಿತ್ರ ಘಟನೆ ನಡೆದಿದೆ. ಇದರ ವಿಡಿಯೋ ಇದೇಗಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೌದು, ‘ಅಭಿ ಕ್ಯುಸಿನ್’ ಎಂಬ ಇನ್‌ಸ್ಟಾಗ್ರಾಮ್ ಪುಟದ ಮೂಲಕ ಹಂಚಿಕೊಂಡ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ವೀಡಿಯೊದಲ್ಲಿ, ಕ್ಯಾಪ್ಸಿಕಂ ನಿಂದ ರೆಸಿಪಿ ಒಂದನ್ನು ತಯಾರಿಸುವಾಗ ಮತ್ತು ತರಕಾರಿಯನ್ನು ಕತ್ತರಿಸಿದಾಗ ತಾನು ಕಂಡುಕೊಂಡದ್ದನ್ನು ಮಹಿಳೆ ವಿವರಿಸುತ್ತಾಳೆ. ಈ ವೇಳೆ ದೊಣ್ಣೆ ಮೆಣಸಿನಕಾಯಿಯಿಂದ ಒಂದು ಚೇಳು ಹೊರಹೊಮ್ಮಿತು. ತಟ್ಟೆಯಲ್ಲಿ ಕತ್ತರಿಸಿದ ತುಂಡುಗಳ ನಡುವೆ ಅದು ಬಿದ್ದಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಬಳಿಕ ಅವಳು”ದೇಖಿಯೇ ಕ್ಯಾ ದಿಖ್ ಗಯಾ… ಬಿಚ್ಚೂ, ಯಾನಿ ಕಿ ಚೇಳು,” ಎಂದು ಚಾಕುವಿನಿಂದ ಜೀವಿಯನ್ನು ತೋರಿಸುತ್ತಾ ಹೇಳುತ್ತಾಳೆ. ಮೊದಲಿಗೆ, ಅದು ನಿರ್ಜೀವ ಎಂದು ಅವಳು ಭಾವಿಸಿದಳು. ಆದರೆ ಅವಳು ತನ್ನ ಚಾಕುವಿನಿಂದ ಅದನ್ನು ನಿಧಾನವಾಗಿ ತಳ್ಳಿದಾಗ, ಚೇಳು ಚಲಿಸಲು ಪ್ರಾರಂಭಿಸುತ್ತದೆ.
Comments are closed.