Shivamogga : ಶಾಸಕರ ಮನೆಗೆ ನುಗ್ಗಿದ ಕಾಡಾನೆ!!

Shivamogga : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಚ್ಚಲು ಹಾಗೂ ಕಲ್ಗುಂಡಿ ಸಮೀಪ ಕಳೆದೆರಡು ದಿನಗಳಿಂದ ಓಡಾಡಿ ಹಾವಳಿ ಇಡುತ್ತಿದ್ದ ಕಾಡಾನೆ ಇಂದು ( ಜೂನ್ 1 ) ಬೆಳಗ್ಗೆ 5.30ರ ಸಮಯಕ್ಕೆ ಶಾಸಕ ಆರಗ ಜ್ಞಾನೇಂದ್ರ ಅವರ ಮನೆಗೆ ನುಗ್ಗಿದೆ. ಇದರಿಂದ ಸ್ಥಳೀಯರು ಶಾಸಕರೇ ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಪ್ರದೇಶದಲ್ಲಿ ಕಾಡಾನೆ ಕಾರಿಡಾರ್ಗೆ ಅಡ್ಡಿಯುಂಟಾದ ಕಾರಣ ಹಲವಾರು ಕಾಡಾನೆಗಳು ಶಿವಮೊಗ್ಗದ ತೀರ್ಥಹಳ್ಳಿಯ ಕಡೆಗೆ ಆಗಮಿಸಿದ್ದು, ಈ ಒಂಟಿ ಸಲಗವೂ ಸಕಲೇಶಪುರ ಭಾಗದಿಂದ ಬಂದ ಆನೆ ಎಂದು ಹೇಳಲಾಗುತ್ತಿದೆ. ಆನೆ ಉಪಟಳ ಕಳೆದೆರಡು ದಿನಗಳಿಂದ ಹೆಚ್ಚಿದ್ದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಎಚ್ಚರಿಸಿದ್ದರು. ಆದರೆ ಇದೀಗ ಶಾಸಕರ ಮನೆಗೇ ಕಾಡಾನೆ ನುಗ್ಗಿದೆ.
ಇನ್ನು 15 ವರ್ಷದ ಈ ಗಂಡಾನೆ ಕುತ್ತಿಗೆಗೆ ರೇಡಿಯೊ ಕಾಲರ್ ಅಳವಡಿಸಲಾಗಿದೆಯಾದರೂ ಅದರ ರಿಯಲ್ ಟೈಮ್ ಅಪ್ಡೇಟ್ ನಾಲ್ಕೈದು ಗಂಟೆಗಳು ತಡವಾಗಿ ಬರುತ್ತಿರುವ ಕಾರಣ ಆನೆಯನ್ನು ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
Comments are closed.