USA: ಜೇನು ನೊಣಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿ – 25 ಕೋಟಿ ಜೇನು ನೊಣಗಳು ಹೊರಕ್ಕೆ!!

Share the Article

USA: ಅಮೆರಿಕದ ವಾಷಿಂಗ್ಟನ್​ನಲ್ಲಿ ಲಕ್ಷಾಂತರ ಜೇನುನೊಣಗಳನ್ನು ಸಾಗಿಸುತ್ತಿದ್ದ ಟ್ರಕ್ ಒಂದು ಪಲ್ಟಿಯಾಗಿದೆ. ಇದರ ಪರಿಣಾಮ ಬರೋಬ್ಬರಿ 25 ಕೋಟಿ ಜೇನು ನೊಣಗಳು ಹಾರಿ ಹೋಗಿವೆ. ಹೀಗಾಗಿ ಜೇನುನೊಣಗಳ ಅಪಾಯವಿರುವ ಕಾರಣ ಜನರು ಈ ಪ್ರದೇಶದಿಂದ ದೂರವಿರಬೇಕೆಂದು ತಿಳಿಸಲಾಗಿದೆ.

ಹೌದು, ಟ್ರಕ್ ಒಂದರಲ್ಲಿ 31,750 ಕೆಜಿಗೂ ಹೆಚ್ಚು ಸಜೀವ ಜೇನುಗೂಡುಗಳನ್ನು ಹೊತ್ತೊಯ್ಯಲಾಗುತ್ತಿತ್ತು ಎಂದು ವರದಿಯಾಗಿದ್ದು, ಈ ಅಪಘಾತದಿಂದಾಗಿ, ಗೂಡಿನಲ್ಲಿದ್ದ ಜೇನು ನೊಣಗಳೆಲ್ಲ ಹೊರ ಬಿದ್ದಿವೆ ಎನ್ನಲಾಗಿದೆ. ತಕ್ಷಣವೇ ಸಾರ್ವಜನಿಕ ಮುನ್ನೆಚ್ಚರಿಕೆ ಬಿಡುಗಡೆ ಮಾಡಿರುವ ಪ್ರಾಧಿಕಾರಗಳು, ಜೇನು ನೊಣಗಳ ತೀವ್ರ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ, ಈ ಪ್ರದೇಶದಲ್ಲಿ ಹಾದು ಹೋಗುವುದನ್ನು ತಡೆಗಟ್ಟಿ ಎಂದು ಜನರಿಗೆ ಅಪಾಯದ ಎಚ್ಚರಿಕೆ ನೀಡಿವೆ.

ಹಾಲಿವುಡ್ ದುರಂತ ಚಿತ್ರವೊಂದರಲ್ಲಿನ ದೃಶ್ಯದಂತೆ ಕಾಣುತ್ತಿದ್ದು, 25 ಕ್ಕೂ ಹೆಚ್ಚು ಜೇನುಸಾಕಣೆದಾರ ಮಾಸ್ಟರ್ ಗಳ ಬೆಂಬಲದೊಂದಿಗೆ ತುರ್ತು ಸಿಬಂದಿ ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿ ಕೈ ಮೀರುವ ಮೊದಲು ಜೇನುನೊಣಗಳನ್ನು ರಕ್ಷಿಸಿ ಮತ್ತೆ ಗೂಡು ಸೇರಿಸುವುದಾಗಿದೆ. ಜೇನುನೊಣಗಳು ತಮ್ಮ ರಾಣಿ ಜೇನುನೊಣಗಳೊಂದಿಗೆ ಮತ್ತೆ ಒಂದಾಗಲು ಮತ್ತು ಅವುಗಳ ಗೂಡುಗಳಿಗೆ ಮರಳಲು ಸಹಾಯ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.