Nitish Kumar: ವೇದಿಕೆಯಲ್ಲಿ ನಿತೀಶ್ ಕುಮಾರ್ ಮತ್ತೆ ಎಡವಟ್ಟು – ಪ್ರಧಾನಿ ಮೋದಿ ಹೆಸರು ಮರೆತು ಕಕ್ಕಾಬಿಕ್ಕಿ!!

Share the Article

Nitish Kumar: ಸಾರ್ವಜನಿಕ ವೇದಿಕೆಗಳಲ್ಲಿ ವಿಚಿತ್ರವಾಗಿ ನಡೆದುಕೊಳ್ಳುವ ಮೂಲಕ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಈಗ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದು, ಪ್ರಧಾನಿ ಮೋದಿ ಅವರ ಹೆಸರು ಹೇಳುವ ಬದಲು ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರು ಹೇಳಿದ್ದಾರೆ.

ಹೌದು, ಶುಕ್ರವಾರ ರೋಹ್ತಾಸ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಕುಮಾರ್, ಜಾತಿ ಆಧಾರಿತ ಜನಗಣತಿಯನ್ನು “ಐತಿಹಾಸಿಕ ಹೆಜ್ಜೆ” ಮತ್ತು ಅವರು ಪ್ರತಿಪಾದಿಸಿದ ದೀರ್ಘಕಾಲದ ಬೇಡಿಕೆ ಎಂದು ಕರೆದರು. ಬಿಹಾರದ ಅಭಿವೃದ್ಧಿ ಪ್ರಯಾಣದಲ್ಲಿ “ಅಚಲ” ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ ಅವರು, ನೆರೆದಿದ್ದ ಜನರು ಎದ್ದು ನಿಂತು ಪ್ರಧಾನಿ ಮೋದಿಗೆ ಸಾಮೂಹಿಕ ಕೃತಜ್ಞತೆ ಸಲ್ಲಿಸುವಂತೆ ಒತ್ತಾಯಿಸಿದರು. ಮೋದಿ ಎಂದು ಹೇಳುವ ಬದಲು ಅಟಲ್‌ಜೀ ಎಂದು ಸಂಬೋಧಿಸಿದ್ದಾರೆ. ಆಮೇಲೆ ಅಟಲ್ ಬಿಹಾರಿ ವಾಜಪೇಯಿ ಮೊದಲೇ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು ಎಂದು ತಮ್ಮ ಮಾತನ್ನು ಬದಲಾಯಸಿದ್ದಾರೆ.

ಇನ್ನು ಈ ಘಟನೆಯನ್ನು ಉಲ್ಲೇಖಿಸಿ, ನಿತೀಶ್ ಕುಮಾರ್ ಅವರ ಆರೋಗ್ಯದಲ್ಲಿ ಸಮಸ್ಯೆ ಇದೆಯಾ ಎಂದು ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ.

Comments are closed.