Prakash Raj: ಮನೆ ಮನೆಗೆ ‘ಸಿಂಧೂರ’ ತಲುಪಿಸಲು ಮುಂದಾದ ಮೋದಿ – ‘ಮುದುಕನಿಂದ ಯಾವ ಮಹಿಳೆ ಸಿಂಧೂರ ಸ್ವೀಕರಿಸುತ್ತಾಳೆ’ ಎಂದ ಪ್ರಕಾಶ್ ರಾಜ್

Prakash Raj: ಆಪರೇಷನ್ ಸಿಂಧೂರ್ ಯಶಸ್ವಿಯಾದ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರದ ಪ್ರತಿಯೊಂದು ಮಹಿಳೆಯ ಮನೆಗೆ ಸಿಂಧೂರವನ್ನು ತಲುಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿಯವರ ನಡೆಯನ್ನು ನಟ ಪ್ರಕಾಶ್ ರಾಜ್ ಅವರು ಬಹಳ ವ್ಯಂಗ್ಯವಾಗಿ ಟೀಕಿಸಿದ್ದಾರೆ.

ಹೌದು, ನಟ ಪ್ರಕಾಶ್ ರಾಜ್, ಮುದುಕನಿಂದ (Old man) ಯಾವ ಮಹಿಳೆ ತಾನೇ ಸಿಂಧೂರ ಸ್ವೀಕರಿಸುತ್ತಾಳೆ ಎಂದು ಪ್ರಧಾನಿ ಮೋದಿಯನ್ನು ಟೀಕಿಸಿದ್ದಾರೆ. ಈ ಮೂಲಕ ಆಪರೇಷನ್ ಸಿಂಧೂರ ಕುರಿತು ವ್ಯಂಗ್ಯವಾಡುವುದರೊಂದಿಗೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಅಂದಹಾಗೆ ಕಲಾವಿದ ಸತೀಶ್ ಆಚಾರ್ಯ ವ್ಯಂಗ್ಯಚಿತ್ರವೊಂದನ್ನು ರಚಿಸಿದ್ದು, ಅದರಲ್ಲಿ ಆಪರೇಷನ್ ಸಿಂಧೂರ್ ಅನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬಂತೆ ಬಿಂಬಿಸಲಾಗಿತ್ತು. ಹರ್ ಘರ್ ಸಿಂಧೂರ್ ಎಂದು ಈ ಚಿತ್ರಕ್ಕೆ ಶೀರ್ಷಿಕೆ ನೀಡುವ ಮೂಲಕ ಹರ್ ಘರ್ ಮೋದಿ ಎಂಬ ಹಳೆಯ ಘೋಷಣೆಯನ್ನು ಲೇವಡಿ ಮಾಡಲಾಗಿತ್ತು. ಈ ಚಿತ್ರವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಕಾಶ್ ರಾಜ್, ಮುದುಕನಿಂದ (Old man) ಯಾವ ಮಹಿಳೆ ತಾನೇ ಸಿಂಧೂರ ಸ್ವೀಕರಿಸುತ್ತಾಳೆ ಎಂದು ಪ್ರಧಾನಿ ಮೋದಿಯನ್ನು ಟೀಕಿಸಿದ್ದಾರೆ.
Comments are closed.