ಇಂದು, ಜೂನ್ 1 ರಿಂದ ಎಟಿಎಂ ವಹಿವಾಟು ಶುಲ್ಕ ಏರಿಸಿದ ಖಾಸಗಿ ಬ್ಯಾಂಕ್ ಗಳು

Share the Article

ನವದೆಹಲಿ: ಇಂದಿನಿಂದ, ಜೂನ್ 1, 2025 ರಿಂದ ಜಾರಿಗೆ ಬರುವಂತೆ ಎಟಿಎಂ ನಗದು ಹಿಂಪಡೆಯುವಿಕೆ ಶುಲ್ಕವನ್ನು ಹೆಚ್ಚಿಸಲು ಆರ್‌ಬಿಐ ಬ್ಯಾಂಕುಗಳಿಗೆ ಅನುಮತಿ ನೀಡಿದೆ. ಆದರೆ ಗ್ರಾಹಕರು ಇನ್ನೂ ತಮ್ಮ ಬ್ಯಾಂಕ್ ಎಟಿಎಂಗಳಲ್ಲಿ 5 ಉಚಿತ ವಹಿವಾಟುಗಳನ್ನು ಮತ್ತು ಮೆಟ್ರೋ ಪ್ರದೇಶಗಳಲ್ಲಿನ ಇತರ ಬ್ಯಾಂಕ್‌ಗಳಲ್ಲಿ 3 ಉಚಿತ ವಹಿವಾಟುಗಳನ್ನು ಮಾಡಬಹುದು. ಅದಕ್ಕಿಂತ ಹೆಚ್ಚು ಎಟಿಎಂ ವ್ಯವಹಾರ ನಡೆಸಿದರೆ ಪ್ರತಿ ವ್ಯವಹಾರಕ್ಕೆ ಈಗ ಇರುವ 21 ರೂಪಾಯಿಗಳಿಂದ 23 ರೂಪಾಯಿಗಳ ತನಕ ಶುಲ್ಕ ಹೆಚ್ಚಿಸಲಾಗಿದೆ.

ಉಚಿತ ಬಳಕೆಯನ್ನು ಮೀರಿದ ವಹಿವಾಟುಗಳಿಗೆ ಎಟಿಎಂ ಹಿಂಪಡೆಯುವಿಕೆ ಶುಲ್ಕವನ್ನು ಹೆಚ್ಚಿಸಲು ಬ್ಯಾಂಕುಗಳಿಗೆ ಅವಕಾಶ ನೀಡುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾರ್ಚ್ 28, 2025 ರಂದು ಹೆಚ್ಚಿಸಿ ಮಾರ್ಗಸೂಚಿ ಬಿಡುಗಡೆ ಮಾಡಿತ್ತು.

ಆರ್‌ಬಿಐನ ಸುತ್ತೋಲೆಯು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (ಆರ್‌ಆರ್‌ಬಿ), ಸಹಕಾರಿ ಬ್ಯಾಂಕುಗಳು, ಅಧಿಕೃತ ಎಟಿಎಂ ನೆಟ್‌ವರ್ಕ್ ಆಪರೇಟರ್‌ಗಳು, ಕಾರ್ಡ್ ಪಾವತಿ ನೆಟ್‌ವರ್ಕ್ ಆಪರೇಟರ್‌ಗಳು ಮತ್ತು ವೈಟ್-ಲೇಬಲ್ ಎಟಿಎಂ ಆಪರೇಟರ್‌ಗಳು ಸೇರಿದಂತೆ ಎಲ್ಲಾ ವಾಣಿಜ್ಯ ಬ್ಯಾಂಕುಗಳಿಗೆ ಅನ್ವಯಿಸುತ್ತದೆ.

ಇದು ಮೇ 1, 2025 ರಿಂದ ಜಾರಿಗೆ ಬರಲಿದೆ ಎಂದು ಆರ್‌ಬಿಐ ಮಾರ್ಚ್ 28 ರಂದು ಸುತ್ತೋಲೆಯಲ್ಲಿ ತಿಳಿಸಿದೆ. ಹೆಚ್ಚಿನ ಬ್ಯಾಂಕುಗಳು ಈ ಮಾರ್ಗಸೂಚಿಯನ್ನು ಕಳೆದ ತಿಂಗಳು ಮೇ 1 ರಂದಿನಿಂದ ಹೆಚ್ಚಿಸಿದ್ದವು.

ಆದರೆ ಖಾಸಗಿ ಸಹಭಾಗಿತ್ವದ ಆಕ್ಸಿಸ್ ಬ್ಯಾಂಕ್ ತಮ್ಮ ಗ್ರಾಹಕರಿಗೆ ನಿನ್ನೆ ತಡರಾತ್ರಿ ಈ ಮೇಲ್ ಕಳುಹಿಸಿ, ಇಂದಿನಿಂದ ಹೆಚ್ಚುವರಿ ಎಟಿಎಂ ವ್ಯವಹಾರಗಳಿಗೆ 21 ರೂಪಾಯಿಯ ಬದಲಿಗೆ 23 ರೂಪಾಯಿ ಹೆಚ್ಚಿಸುವುದರ ತಿಳಿಸಿದೆ. ಕೆಲವು ಬ್ಯಾಂಕ್ ಗಳು ಮೇ 1 ರಲ್ಲಿಯೇ ಹೆಚ್ಚುವರಿ ವ್ಯವಹಾರಕ್ಕೆ ಹೆಚ್ಚಿನ ಶುಲ್ಕ ವಿಧಿಸಿದ್ದವು.

Comments are closed.