Puttur: ಪುತ್ತೂರು: ಗುಡ್ಡ ಕುಸಿತ: ಶಾಸಕ ಅಶೋಕ್ ರೈ ಸಾಕು ಹಸು ಸಾವು!

Puttur: ಶನಿವಾರ ತಡ ರಾತ್ರಿ ಭಾರೀ ಮಳೆಗೆ ಧರೆ ಕುಸಿದು ಪುತ್ತೂರು (Puttur) ಶಾಸಕ ಅಶೋಕ್ ರೈ ಅವರ ಮನೆಯ ಸಮೀಪದ ದನದ ಕೊಟ್ಟಿಗೆ ನಾಶವಾಗಿದ್ದು ಅಲ್ಲಿದ್ದ ಎರಡು ದನಗಳ ಪೈಕಿ ಒಂದು ದನ ಸಾವನ್ನಪ್ಪಿದ ಘಟನೆ ನಡೆದಿದೆ.

ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಈ ಘಟನೆ ನಡೆದಿದೆ. ಗುಡ್ಡ ಭಾರೀ ಪ್ರಮಾಣದಲ್ಲಿ ಕುಸಿತವಾದ ಕಾರಣ ಕೊಟ್ಟಿಗೆ ನೆಲಸಮವಾಗಿದೆ. ಕೊಟ್ಟಿಗೆಯಲ್ಲಿದ್ದ ಒಂದು ಹಸು ಮಣ್ಣಿನಡಿಗೆ ಬಿದ್ದು ಸಾವನ್ನಪ್ಪಿದರೆ ಇನ್ನೊಂದು ಹಸುವಿಗೂ ಗಾಯವಾಗಿದೆ. ಮಣ್ಣಿನಡಿಯಲ್ಲಿದ್ದ ಗಾಯಗೊಂಡ ಹಸುವನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ. ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿ ಭೇಟಿ ನೀಡಿದ್ದಾರೆ.
Comments are closed.