Bjp: ಮತ್ತೆ ಧಾರವಾಹಿ ಲೋಕಕ್ಕೆ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ!

Bjp: ಮಾಜಿ ಕೇಂದ್ರ ಸಚಿವೆ, ಬಿಜೆಪಿಯ (Bjp) ರಾಷ್ಟ್ರೀಯ ನಾಯಕಿಯಾಗಿ ಗುರುತಿಸಿಕೊಂಡಿರುವ ಸ್ಮೃತಿ ಇರಾನಿಯ ಈ ಧಾರಾವಾಹಿ ಪ್ರತಿ ಮನೆಯಲ್ಲಿಯೂ ಪ್ರಸಾರವಾಗುತ್ತಿತ್ತು. ಇದೀಗ ಈ ಧಾರಾವಾಹಿಯ ಎರಡನೇ ಸೀಸನ್ ಆರಂಭವಾಗಿದೆ.

ಮೊದಲ ಬಾರಿ 2000ರಲ್ಲಿ ‘ಕ್ಯೂಂಕಿ ಸಾಸ್ ಬಿ ಕಭಿ ಬಹು ಥೀ’ ಧಾರಾವಾಹಿ ಪ್ರಸಾರವಾಗಿತ್ತು. ಧಾರಾವಾಹಿಯ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ಸ್ಮೃತಿ ಇರಾನಿಗೆ ಆಗ ಸುಮಾರು 25 ವರ್ಷ ವಯಸ್ಸು. ಧಾರಾವಾಹಿಯಲ್ಲಿ ಸೊಸೆ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಸೊಸೆ ತುಳಸಿಯ ಪಾತ್ರದಲ್ಲಿ ನಟಿಸಿದ್ದರು. ಬರೋಬ್ಬರಿ ಎಂಟು ವರ್ಷಗಳಿಗೂ ಹೆಚ್ಚು ಕಾಲ ಆಗ ಈ ಧಾರಾವಾಹಿ ಪ್ರಸಾರವಾಗಿತ್ತು.
ಧಾರಾವಾಹಿಯ ಕತೆಯಲ್ಲಿ ಮೂರು ಜನರೇಷನ್ನ ಕತೆಯನ್ನು ಹೇಳಲಾಗಿತು. ಇದೀಗ ಈ ಧಾರಾವಾಹಿಯ ಎರಡನೇ ಸೀಸನ್ ಚಿತ್ರೀಕರಣ ಪ್ರಾರಂಭವಾಗಿದ್ದು, ಹಲವಾರು ವರ್ಷಗಳ ಬಳಿಕ ಸ್ಮೃತಿ ಇರಾನಿಯವರು ಮತ್ತೆ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳಲಿದ್ದಾರೆ.
2013ರಲ್ಲಿ ಕೊನೆಯ ಬಾರಿಗೆ ಸ್ಮೃತಿ ಇರಾನಿ ಧಾರಾವಾಹಿಯೊಂದರಲ್ಲಿ ನಟಿಸಿದ್ದರು. ಬಳಿಕ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾದರು.
Comments are closed.