Donald Trump: ಮಾರಿ ಕಣ್ಣು ಹೋರಿ ಮ್ಯಾಲೆ! ಟ್ರಂಪ್ ಕಣ್ಣು ಮಲೆನಾಡ ಅಡಿಕೆ ಹಾಳೆ ತಟ್ಟೆ ಮ್ಯಾಲೆ!!
ಅಡಿಕೆ ಹಾಳೆ ತಟ್ಟೆಯಲ್ಲಿ ಕ್ಷಾರೀಯ ಅಂಶ ಇದೆ ಎಂದು ತಗಾದೆ ತೆಗೆದು ನಿಷೇಧಕ್ಕೆ ಮುಂದಾದ ಅಮೆರಿಕ!

Donald Trump: ಮಂಗಳೂರು: ಟ್ರಂಪ್ ಅಮೇರಿಕಾ ಅಧ್ಯಕ್ಷರಾದ ದಿನದಿಂದ ನಿಂತಲ್ಲಿ ನಿಲ್ಲ ಲಾರದೆ ಏನಾದರೂ ಒಂದು ಕಿತಾಪತಿ ಮಾಡಿಕೊಂಡೇ ಸುದ್ದಿಗೆ ಗ್ರಾಸವಾಗುತ್ತಿದ್ದಾರೆ. ಟ್ರಂಪ್ ಅಧಿಕಾರ ವಹಿಸಿ ಕೊಂಡ ತಕ್ಷಣ ಇಳಿದದ್ದೇ ಜಾಗತಿಕ ತೆರಿಗೆ ಸಮರಕ್ಕೆ. ಆದರೆ ಟ್ರಂಪ್ ರ ತೆರಿಗೆ ಸಮರದ ರ೦ಪು ಇದೀಗ ಮುಗಿದು ಹೋಯಿತೋ ಏನೋ? ಹೀಗಾಗಿ ಇದೀಗ ಅವರ ವಕ್ರ ದೃಷ್ಟಿ ಬಿದ್ದಿದ್ದೇ ಮಲೆನಾಡಿನ ಹಾಳೆ ತಟ್ಟೆಗಳ ಮೇಲೆ!
ಹೌದು, ಜಗತ್ತಿನಾದ್ಯಂತ ಪ್ಲಾಸ್ಟಿಕ್ ನಿಷೇಧದ ಬಳಿಕ ಮಲೆನಾಡಿನ ಅಡಿಕೆಯ ಹಾಳೆ ತಟ್ಟೆ ಉತ್ಪನ್ನಗಳಿಗೆ ಜಗತ್ತಿನಾದ್ಯಂತ ಭಾರಿ ಬೇಡಿಕೆ ಇದೆ. ಅದರಲ್ಲೂ ಮುಖ್ಯವಾಗಿ ಈ ಹಾಳೆ ತಟ್ಟೆ ಉತ್ಪನ್ನಗಳಿಗೆ ಜಗತ್ತಿನಲ್ಲಿ ಅಮೆರಿಕವೇ ಪ್ರಮುಖ ಆಮದು ಮಾರುಕಟ್ಟೆ ರಾಷ್ಟ್ರವಾಗಿದ. ಆದರೆ ಇದೀಗ ಈ ಅಮೆರಿಕವೇ ಈ ಹಾಳೆ ತಟ್ಟಿಗಳಲ್ಲಿ ಆರೋಗ್ಯಕ್ಕೆ ಹಾನಿಕರವಾದ ಕ್ಷಾರೀಯ ಅಂಶ ವಿದೆ ಎಂದು ತಗಾದೆ ತೆಗೆದು ನಿಷೇಧಕ್ಕೆ ಮುಂದಾಗಿದೆ. ಇದರಿಂದಾಗಿ ಅಡಿಕೆ ಬೆಳೆಗಾರರು ಹಾಗೂ ಅಡಿಕೆ ಹಾಳೆ ತಟ್ಟೆ ಘಟಕ ಉದ್ಯಮವನ್ನು ನಡೆಸುತ್ತಿರುವ ಮಲೆನಾಡಿನ ಲಕ್ಷಾಂತರ ಮಂದಿ ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಅಡಿಕೆ ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಅದರಲ್ಲೂ ಮುಖ್ಯವಾಗಿ ಮಲೆನಾಡಿನ ರೈತನಿಗೆ ಪ್ರಮುಖವಾಗಿ ಆದಾಯವನ್ನು ಕೊಡುವುದು ಸಹ ಈ ಅಡಿಕೆ ಬೆಳೆಯೇ. ಅದೇ ರೀತಿ ಮಲೆನಾಡಿನ ರೈತರಿಗೆ ಅಡಿಕೆ ಬೆಳೆ ಅವರ ಆದಾಯದ ಪ್ರಮುಖ ಮೂಲವೂ ಹೌದು. ಆದರೆ ಇತ್ತೀಚೆಗೆ ಅಡಿಕೆ ಕ್ಯಾನ್ಸರ್ ಕಾರಕ ಎಂದು ಅಡಿಕೆಯ ಮೇಲೆ ಬಂದಿದ್ದ ಅಪವಾದವೊಂದು ಕಳಚುವ ಮುನ್ನವೇ ಇದೀಗ ಅಡಿಕೆ ಹಾಳೆ ತಟ್ಟೆಯಲ್ಲಿ ಕ್ಷಾರೀಯ ಅಂಶವಿದೆಯೆಂಬ ಮತ್ತೊಂದು ಆರೋಪದ ಗುಮ್ಮ ಎದ್ದಿರುವುದರಿಂದ ಇದೀಗ ಅಡಿಕೆ ಹಾಳೆಯ ಮೇಲೂ ನಿಷೇಧದ ತೂಗುಗತ್ತಿ ಬೀ ಸಲಾರಂಭಿಸಿದೆ.
ಅಮೇರಿಕಾದ ಅಧ್ಯಕ್ಷ ಟ್ರಂಪ್ ರ ಕಣ್ಣು ಇದೀಗ ಮಲೆನಾಡಿನ ಅಡಿಕೆ ಹಾಳೆ ತಟ್ಟೆಯ ಮೇಲೆ ಬಿದ್ದಿರುವುದರಿಂದ ದಕ್ಷಿಣ ಭಾರತದ ಅತಿ ದೊಡ್ಡ ಅಡಿಕೆ ಹಾಳೆ ತಟ್ಟೆ ಉದ್ಯಮಕ್ಕೆ ಕಾರ್ಮೋಡ ಕವಿದಂತಾಗಿದೆ. ಉತ್ತಮ ಬೆಲೆಯ ಕಾರಣಕ್ಕಾಗಿ ಅಡಿಕೆ ಬೆಳೆ ಮಲೆನಾಡಿನಿಂದ ಈಗ ಬಯಲು ಸೀಮೆ ಕಡೆಯತ್ತಲೂ ದಾಟಿದೆ. ಏಕೆಂದರೆ ಅಡಿಕೆ ಬೆಳೆಯಲ್ಲಿ ಅಡಿಕೆ ಪ್ರಮುಖ ಉತ್ಪನ್ನವಾದರೆ ಅದರ ಹಾಳೆ ಉಪ ಉತ್ಪನ್ನವಾಗಿದೆ. ಹೀಗಾಗಿ ಈ ಹಾಳೆಯಿಂದ ಲಕ್ಷಾಂತರ ಜನರು ಬದುಕು ಕಟ್ಟಿಕೊಂಡು ವಿವಿಧ ಮಾದರಿಯ ತಟ್ಟೆ, ಬಟ್ಟಲು ತಯಾರಿ ಉದ್ಯಮಗಳನ್ನು ಮಾಡಿಕೊಂಡು ಆದಾಯ ಗಳಿಸುತ್ತಾ ನೆಮ್ಮದಿಯ ನಿ ಟ್ಟುಸಿರು ಬಿಡುತ್ತಿದ್ದಾರೆ.
ವಿಶ್ವದ 25 ರಾಷ್ಟ್ರಗಳಿಗೆ ಈ ಅಡಿಕೆ ಹಾಳೆ ತಟ್ಟಿಗಳನ್ನು ಮಲೆನಾಡಿನಿಂದ ರಫ್ತು ಮಾಡಲಾಗುತ್ತದೆ. ಪ್ಲಾಸ್ಟಿಕ್ ತಟ್ಟೆಗೆ ಬದಲಾಗಿ ಈಗ ವಿಶ್ವದಾದ್ಯಂತ ಹಾ ಳೆತಟ್ಟೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಹೀಗಾಗಿ ವಿದೇಶಗಳಲ್ಲಿ ಇದಕ್ಕೆ ಭಾರಿ ಬೇಡಿಕೆ ಇದೆ. ಆದರೆ ಈ ಮಧ್ಯೆ ಈ ಹಾಳೆ ತಟ್ಟೆಗಳಲ್ಲಿ ಆರೋಗ್ಯಕ್ಕೆ ಹಾನಿಕರವಾದ ಕ್ಷಾರೀಯ ಅಂಶವಿರುವುದರಿಂದ ಅಡಿಕೆ ಹಾಳೆ ತಟ್ಟಿಗಳನ್ನು ನಿಷೇಧಿಸಬೇಕೆಂದು ಹಾಳೆತಟ್ಟೆಗಳ ಪ್ರಮುಖ ಆಮದುದಾರ ರಾಷ್ಟ್ರವಾದ ಅಮೇರಿಕಾದ ಫುಡ್ ಅಂಡ್ ಡ್ರಗ್ಸ್ ಅಡ್ಮಿನಿಸ್ಟ್ರೇಷನ್ ಇದೀಗ ಹೇಳಿದೆ.
ಹೀಗಾಗಿ ಟ್ರಂಪ್ ನ ವಕ್ರದೃಷ್ಟಿ ಇದೀಗ ನೇರವಾಗಿ ಅಡಿಕೆ ತಟ್ಟೆ ಮೇಲೆ ಬಿದ್ದಿರುವುದರಿಂದ ಈಗಾಗಲೇ ಮಲೆನಾಡಿನದ್ಯಂತ ಉತ್ಪಾದನೆ ಆಗಿರುವ ಅದೆಷ್ಟೋ ಹಾಳೆ ತಟ್ಟೆಗಳ ಸಂಗ್ರಹವನ್ನು ಅಮೇರಿಕಾ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ. ಜಾಗತಿಕವಾಗಿ ಪ್ರತೀ ವರ್ಷಕ್ಕೆ4.500 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯಗಳ ಅಡಿಕೆ ಹಾಳೆ ತಟ್ಟೆ ಉತ್ಪನ್ನವನ್ನು ಮಾರಾಟ ಮಾಡಲಾಗುತ್ತದೆ. ಇದರಿಂದಾಗಿ ಅಡಿಕೆ ಹಾಳೆ ತಟ್ಟೆ ಉತ್ಪನ್ನಕ್ಕೆ ಭಾರಿ ಹೊಡೆತ ಬಿದ್ದಿದೆ. ಹೀಗಾಗಿ ಮಲೆನಾಡಿನ ಲಕ್ಷಾಂತರ ಮಂದಿ ಅಡಿಕೆ ಹಾಳೆ ತಟ್ಟೆ ಉತ್ಪಾದಕರು,ಕೂಡಲೇ ಈ ಬಗ್ಗೆ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ಅಮೇರಿಕಾದವರಿಗೆ ವೈಜ್ಞಾನಿಕವಾಗಿ ಅಡಿಕೆ ಹಾಳೆ ತಟ್ಟೆಗಳ ಪರೀಕ್ಷೆ ನಡೆಸಿ ಇದರಲ್ಲಿ ಯಾವುದೇ ಆರೋಗ್ಯಕ್ಕೆ ಹಾನಿಕರವಾದ ಕ್ಷಾರೀಯ ಅಂಶವಿಲ್ಲ ಎಂಬುದನ್ನು ತಿಳಿ ಹೇಳಬೇಕೆಂದು ಒತ್ತಾಯಿಸುತ್ತಿದ್ದಾರೆ.
Comments are closed.