Udupi: ಹರ್ನಿಯಾ ಖಾಯಿಲೆ ಸರ್ಜರಿಗೆ ಹೆದರಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ!!!

Udupi: ಹರ್ನಿಯಾ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಆಪರೇಷನ್ ಗೆ ಹೆದರಿ ಮನೆಯಿಂದ ಕಾಣೆಯಾಗಿದ್ದು ಇದೀಗ ಶವವಾಗಿ ಪತ್ತೆಯಾದ ಘಟನೆ ಕಾಪುವಿನಲ್ಲಿ ನಡೆದಿದೆ.

ಕಟಪಾಡಿ ಏಣಗುಡ್ಡೆ ನಿವಾಸಿ, ಎಪ್ಪತ್ತಮೂರು ವರ್ಷದ ಶೇಖರ್ ಕೋಟ್ಯಾನ್ ಶವವಾಗಿ ಪತ್ತೆಯಾದ ವ್ಯಕ್ತಿ. ಕಾಪು ಗಣಪತಿ ನಾಯಕ್ ಎಂಬವರ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ.
ಆಪರೇಷನ್ ಗೆ ಹೆದರಿ ಈ ದುರಂತಕ್ಕೆ ಕೈ ಹಾಕಿರಬಹುದು ಎಂದು ಶಂಕಿಸಲಾಗಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.