Mukhyamantri Chandru: ‘ಶಿವಣ್ಣನ ರೀತಿ ಇರೋರೆಲ್ಲಾ ನಾಡದ್ರೋಹಿಗಳು’ – ಮುಖ್ಯಮಂತ್ರಿ ಚಂದ್ರು ಹೇಳಿಕೆ

Share the Article

Mukhyamantri Chandru: ಯಾರೆಲ್ಲಾ ಶಿವಣ್ಣನ ರೀತಿ ಇನ್ನು ಕೂಡಾ ಕಮಲ್‌ ಹಾಸನ್‌ ಪರವಾಗಿಯೇ ಇದ್ದಾರೋ ಅವರೆಲ್ಲರೂ ನನ್ನ ದೃಷ್ಟಿಯಲ್ಲಿ ನಾಡದ್ರೋಹಿಗಳು ಎಂದು ಕನ್ನಡದ ಹಿರಿಯ ನಟ ಹಾಗೂ ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಅವರು ತಮಿಳು ನಟನ ಕಮಲ್ ಹಾಸನ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಅಲ್ಲದೇ ನಟ ಶಿವರಾಜ್ ಕುಮಾರ್ ವಿರುದ್ಧವೂ ಗರಂ ಆದಂತ ಅವರು, ಶಿವಣ್ಣ ರೀತಿಯಲ್ಲಿ ಇನ್ಯಾರು ಕಮಲ್ ಹಾಸನ್ ಪರವಾಗಿದ್ದರೂ ಅವರೆಲ್ಲ ನಾಡದ್ರೋಹಿಗಳು ಅಂತ ಕೆಂಡಕಾರಿದ್ದಾರೆ.

ಈ ಕುರಿತಾಗಿ ಮಾತನಾಡಿದ ಅವರು ಭಾಷೆ ಬಗ್ಗೆ ಜ್ಞಾನ ಇಲ್ಲದೆ, ನಾನು ಹೇಳಿದ್ದೇ ಸರಿ, ನನ್ನನ್ನು ಮೀರಿಸುವವರು ಯಾರೂ ಇಲ್ಲ ಎನ್ನೋ ಧೋರಣೆಯಲ್ಲಿ ಕಮಲ್‌ ಹಾಸನ್‌ ಮಾತನಾಡಿದ್ದಾರೆ. ಇದನ್ನು ನಿಜವಾಗಿ ತಮಿಳುನಾಡಿನವರೇ ಖಂಡಿಸಬೇಕಿತ್ತು. ಇಂತದ್ದನ್ನೆಲ್ಲ ಒಬ್ಬ ದೊಡ್ಡ ವ್ಯಕ್ತಿಯಾಗಿ ಮಾಡಬಾರದು ಎಂದು ಹೇಳಬೇಕಿತ್ತು. ದೊಡ್ಡ ವ್ಯಕ್ತಿ ಎಂದು ನಾವು ಅಂದುಕೊಳ್ಳುತ್ತಿದ್ದೇವೆ ಅಷ್ಟೇ. ಸಣ್ಣತನ ತೋರಿಸಿ ಎಲ್ಲರೂ ಛೀಮಾರಿ ಹಾಕುತ್ತಿದ್ದಾರೆ ಎಂದರು.

ಅಲ್ಲದೆ ನಾಡು ನುಡಿಗೆ ಧಕ್ಕೆ ಬಂದಾಗ ರಾಜ್ ಕುಟುಂಬ ಒಂದೇ ಕನ್ನಡ ನಾಡಲ್ಲ, ಶಿವಣ್ಣ ಒಬ್ಬರೇ ಕನ್ನಡ ನಾಡಲ್ಲ. ಕನ್ನಡ ನಾಡಿನಿಂದ ಅವರೆಲ್ಲ ಬಂದಿದ್ದಾರೆ. ಆದ್ರೇ ಅವರ ಪ್ರತಿಕ್ರಿಯೆ ನೋಡಿದಾಗ ಅರಿವಿನ ಕೊರತೆಯಿಂದ ಫಲಾಯನವಾದ ಮಾಡಿದ್ರು ಅನ್ನಿಸುತ್ತೆ ಎಂಬುದಾಗಿ ಬೇಸರ ಹೊರ ಹಾಕಿದರು. ಬೆಂಗಳೂರಿಗೆ ಬಂದಾಗ ಕೇಳಬಹುದಿತ್ತಲ್ಲ ಅಂತ ಹೇಳ್ತಾರೆ. ಹಾಗಿದ್ದರೇ ಕನ್ನಡ ವಿಚಾರಕ್ಕೆ ಬಂದಾಗ ನೀವೇನು ಮಾಡ್ತಿದ್ರಿ ಎಂದು ಪ್ರಶ್ನಿಸಿದಂತ ಅವರು, ನನಗೆ ಅರ್ಥವೇ ಆಗಲಿಲ್ಲ ಅನ್ನೋದು ಬೇಜವಾಬ್ದಾರಿ ತನ ಎಂದರಲ್ಲದೇ ಶಿವಣ್ಣ ರೀತಿಯಲ್ಲಿ ಇನ್ನೂ ಯಾರು ಅವರ (ಕಮಲ್‌ ಹಾಸನ್) ಪರವಾಗಿದ್ದಾರೋ ಅವರೆಲ್ಲ ನಾಡದ್ರೋಹಿಗಳು ಅಂತ ಮಾರ್ಮಿಕವಾಗಿ ನುಡಿದು, ವಾಗ್ಧಾಳಿ ನಡೆಸಿದರು.

Comments are closed.