ಪ್ರತಿಭಟನೆ ವೇಳೆ 1400 ಜನರ ನರಮೇಧ: ಬಾಂಗ್ಲಾ ಮಾಜಿ ಪ್ರಧಾನಿ ಶೇಕ್ ಹಸೀನಾಗೆ ಟ್ರಯಲ್ ಶುರು; ಗಲ್ಲು ಸಾಧ್ಯತೆ!

Share the Article

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಕುಣಿಕೆ ರೆಡಿಯಾಗುತ್ತಿದೆ ಎನ್ನಲಾಗುತ್ತಿದೆ. ಆಕೆಯ ವಿರುದ್ಧ ಬಾಂಗ್ಲಾದೇಶದ ನ್ಯಾಯಮಂಡಳಿ ದೊಡ್ಡ ನಿರ್ಧಾರ, ಪ್ರಕಟಿಸಿದ್ದು 1400 ಜನರ ನರಮೇಧ.ಮಾಡಿದ ಬಗ್ಗೆ ಕೋರ್ಟ್ ಟ್ರಯಲ್ ನಡೆಯಲಿದೆ. ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ ಇಂದು ಶೇಖ್ ಹಸೀನಾ ವಿರುದ್ಧದ ಆರೋಪಗಳನ್ನು ವಿಚಾರಣೆ ನಡೆಸುತ್ತಿರುವುದರಿಂದ ನ್ಯಾಯಮಂಡಳಿಯು ಬಾಂಗ್ಲಾವನ್ನು 15 ವರ್ಷಗಳ ಕಾಲ ಆಳಿದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಮರಣದಂಡನೆ ವಿಧಿಸಬಹುದು ಎಂದು ಹೇಳಲಾಗುತ್ತಿದೆ.

ಆಕೆಯು 2024ರಲ್ಲಿ ನಡೆದ ವಿದ್ಯಾರ್ಥಿ ನೇತೃತ್ವದ ಚಳವಳಿಯ ಸಮಯದಲ್ಲಿ ಹಿಂಸಾತ್ಮಕ ದಮನಕ್ಕೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಪ್ರಾಸಿಕ್ಯೂಟರ್‌ಗಳು ಮಾಜಿ ಪ್ರಧಾನಿ ಶೇಖ್ ಹಸೀನಾ ಹಾಗೂ ಇನ್ನಿಬ್ಬರು ಹಿರಿಯ ಅಧಿಕಾರಿಗಳ ಮೇಲೆ ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪ ಹೊರಿಸಿದ್ದಾರೆ. ಶೇಖ್ ಹಸೀನಾ ಅವರು ರಾಜ್ಯ ಭದ್ರತಾ ಪಡೆಗಳು, ಅವರ ರಾಜಕೀಯ ಪಕ್ಷ ಮತ್ತು ಇತರ ಅವರಿಗೆ ಆಪ್ತ ಗುಂಪುಗಳ ಮೇಲೆ ಬಹಳಷ್ಟು ನಾಗರಿಕರನ್ನು ಕೊಲ್ಲಲು ಕ್ರಮಗಳನ್ನು ಕೈಗೊಳ್ಳಲು ನೇರವಾಗಿ ಆದೇಶಿಸಿದ್ದಾರೆ ಎನ್ನುವುದು ಆಕೆಯ ಮೇಲೆ ಇರುವ ಸದ್ಯದ ಆರೋಪ.

ಭಾನುವಾರ ನಡೆದ ವಿಚಾರಣೆಯಲ್ಲಿ ಮುಖ್ಯ ಪ್ರಾಸಿಕ್ಯೂಟರ್ ತಾಜುಲ್ ಇಸ್ಲಾಂ, ಈ ಹತ್ಯೆಗಳನ್ನು ಯೋಜಿಸಲಾಗಿತ್ತು ಎಂದು ಹೇಳಿದರು. ಆಕೆಯ ವಿರುದ್ಧ, ಆಕೆಗೆ ಸಂಬಂಧಿಸಿದ ಹಲವು ಏಜೆನ್ಸಿಗಳ ನಡುವಿನ ವೀಡಿಯೊ ಪುರಾವೆಗಳು ಮತ್ತು ರಹಸ್ಯ ಸಂದೇಶಗಳು ಸಿಕ್ಕಿವೆ ಎನ್ನಲಾಗಿದೆ. ಪ್ರಕರಣದಲ್ಲಿ ಒಟ್ಟು 81 ಜನರನ್ನು ಸಾಕ್ಷಿಗಳಾಗಿ ಹೆಸರಿಸಲಾಗಿದೆ. ಬಾಂಗ್ಲಾದೇಶದಲ್ಲಿ ಇದ್ದ ಅಶಾಂತಿಯ ಸಮಯದಲ್ಲಿ ಭದ್ರತಾ ಪಡೆಗಳು ತೆಗೆದುಕೊಂಡ ಕ್ರಮಗಳಿಗೆ ಸರ್ಕಾರದ ಮುಖ್ಯಸ್ಥರಾಗಿ ಶೇಖ್ ಹಸೀನಾ ಅವರ ಮೇಲೆ ಆದೇಶದ ಜವಾಬ್ದಾರಿ ಇದೆ ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.

ಶೇಖ್ ಹಸೀನಾ

15 ವರ್ಷಗಳ ಕಾಲ ಬಾಂಗ್ಲಾದ ಪ್ರಧಾನಿಯಾಗಿ ಅಧಿಕಾರ ನಡೆಸಿ, ತರುವಾಯ ಆಗಸ್ಟ್‌ನಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂತು. ಆಕೆಯ ರಾಜೀನಾಮೆಗೆ ಒತ್ತಾಯಿಸಿ ಲಕ್ಷಾಂತರ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದರು ಕೊನೆಗೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಾಡಿ ಬಾಂಗ್ಲಾ ಸುರಕ್ಷಿತ ಅಲ್ಲ ಅಂದುಕೊಂಡು ಭಾರತಕ್ಕೆ ನವದೆಹಲಿಗೆ ಪಲಾಯನ ಮಾಡಿದರು. ಆಕೆಯ ಸರ್ಕಾರ ಕೈಗೊಂಡ ಹಲವು ಹಿಂಸಾತ್ಮಕ ಕ್ರಮಗಳಲ್ಲಿ ಸುಮಾರು 1,400 ಜನರು ಸಾವನ್ನಪ್ಪಿದ್ದರು ಮತ್ತು 25,000 ಜನರು ಗಾಯಗೊಂಡಿದ್ದಾರೆ. ಬಹುದೊಡ್ಡ ಸಂಖ್ಯೆಯ ನರಮೇಧ ನಡೆದ ಕಾರಣ ಸರ್ಕಾರದ ಮುಖ್ಯಸ್ಥರಾಗಿ ಶೇಕ್ ಹಸಿನ ಇದೀಗ ಕೋರ್ಟ್ ಟ್ರಯಲ್ ಎದುರಿಸುವುದು ಅನಿವಾರ್ಯವಾಗಿದೆ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಬಾಂಗ್ಲಾದ ಮಾಜಿ ಪ್ರಧಾನಿ, ಹದಿನೈದು ವರ್ಷಗಳ ಕಾಲ ಬಾಂಗ್ಲಾದೇಶವನ್ನು ಆಳಿದ ಹಸೀನಾ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸುವುದು ಬಹುತೇಕ ಖಾತರಿ ಎನ್ನಲಾಗುತ್ತಿದೆ.

Comments are closed.