Bengaluru: ಥಗ್ ಲೈಫ್ ಪ್ರದರ್ಶಿಸಿದರೆ ಥಿಯೇಟರ್ ಗೆ ಬೆಂಕಿಯಿಡುತ್ತೇವೆ! : ಕರವೇ ಎಚ್ಚರಿಕೆ!

Share the Article

Bengaluru : ಕನ್ನಡಿಗರ ಮೇಲೆ ಉದ್ಧಟತನ ತೋರಿರುವ ನಟ ಕಮಲ್ ಹಾಸನ್ ವಿರುದ್ಧ ರೊಚ್ಚಿಗೆದ್ದಿರುವ ಕನ್ನಡಪರ ಹೋರಾಟಗಾರರು ಸಿನಿಮಾ ರಿಲೀಸ್ ಗೆ ಅವಕಾಶ ನೀಡದಿರಲು ಒತ್ತಡ ಹೇರುತ್ತಿದ್ದಾರೆ.

ಈ ಮಧ್ಯೆ ಕರವೇ ಅಧ್ಯಕ್ಷ ನಾರಾಯಣಗೌಡ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಖಡಕ್ ಸಂದೇಶ ರವಾನಿಸಿದ್ದಾರೆ. ರಾಜ್ಯದ ಯಾವುದೇ ಚಿತ್ರಮಂದಿರದಲ್ಲಿ ಅವರ ನಟನೆಯ “ಥಗ್ ಲೈಪ್ ಸಿನೆಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ. ನಮ್ಮವಿರುದ್ಧ ಎಷ್ಟೇ ಪ್ರಕರಣ ದಾಖಲಿಸಿದರೂ ಸಮಸ್ಯೆ ಇಲ್ಲ. ಕಮಲ್ ಹಾಸನ್ ತಮಿಳಿನ ದೊಡ್ಡ ನಟ. ಅವರ ಮೇಲೆ ತುಂಬಾ ಅಭಿಮಾನವಿತ್ತು ಆದರೆ ತಮಿಳರನ್ನು ಓಲೈಸಲು ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ನಟ ಕಮಲ್ ಹಾಸನ್ ಅವರ ನಟನೆಯ ಸಿನಿಮಾ ರಾಜ್ಯದಲ್ಲಿ ಬಿಡುಗಡೆಯಾದಲ್ಲಿ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ನಾರಾಯಣಗೌಡ ಖಡಕ್ ಸಂದೇಶ ರವಾನೆ ಮಾಡಿದ್ದಾರೆ.

Comments are closed.