Karkala: ಕಂಬಳದ ಎರಡು ಕೋಣಗಳು ಅಗ್ನಿ ಅವಘಡಕ್ಕೆ ಸಾವು

Share the Article

Karkala: ಕಾರ್ಕಳ ತಾಲಕಿನ ಕಾಂತಾವರ ಗ್ರಾಮದ ಬೇಲಾಡಿ ಎಂಬಲ್ಲಿ ಹಟ್ಟಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಎರಡು ಕಂಬಳ ಕೋಣಗಳು ಸಾವನ್ನಪ್ಪಿದೆ.

ಬೇಲಾಡಿ ಬಾವ ಅಶೋಕ್‌ ಶೆಟ್ಟಿ ಅವರಿಗೆ ಸೇರಿದ ಹಟ್ಟಿಯಲ್ಲಿ ಈ ಘಟನೆ ನಡೆದಿದೆ. ಮೇ 31 (ಇಂದು) ಮುಂಜಾನೆ ಕೆಲಸದಾಳು ಬಂದು ನೋಡಿದಾಗ ಈ ಘಟನೆ ತಿಳಿದು ಬಂದಿದೆ. ಅಪ್ಪು ಮತ್ತು ತೋನ್ಸೆ ಎಂಬ ಕೋಣಗಳು ಸಾವಿಗೀಡಾಗಿದೆ. ಹಲವು ಕಂಬಳ ಕೂಟಗಳಲ್ಲಿ ಬಹುಮಾನ ಪಡೆದಿದೆ. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.

Comments are closed.