Moodubidri: ಮೂಡುಬಿದಿರೆ: ದರೋಡೆಗೆ ಸಂಚು ನಡೆಸುತ್ತಿದ್ದ ಇಬ್ಬರು ದುಷ್ಕರ್ಮಿಗಳು ಅರೆಸ್ಟ್!

Moodubidri: ಬಡಗ ಮಿಜಾರು ಗ್ರಾಮದ ಬೊಳ್ಳೆಚ್ಚಾರ್ ಎಂಬಲ್ಲಿ. ದರೋಡೆ ಕೃತ್ಯವೆಸಗಲು ಸಂಚು ರೂಪಿಸುತ್ತಿದ್ದ ಶಂಕಿತರನ್ನು ಅರೆಸ್ಟ್ ಮಡುವಲ್ಲಿ ಮೂಡುಬಿದಿರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಗುರುವಾರ ರಾತ್ರಿ ಸುಮಾರು 10.30 ಗಂಟೆಗೆ, ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಪಿಎಸ್‌ಐ ಪ್ರತಿಭಾ ಮತ್ತು ಅವರ ಸಿಬ್ಬಂದಿ, ಇನ್ನೋವಾ ಕಾರಿನಲ್ಲಿದ್ದ ಐವರು ಶಂಕಿತರನ್ನು ಸುತ್ತುವರಿದು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ, ಮಾರ್ಪಾಡಿ ಗ್ರಾಮದ ಜಗದೀಶ್ (29) ಮತ್ತು ಹೊಸಂಗಡಿ ಗ್ರಾಮದ ಪ್ರಶಾಂತ್ ಅಲಿಯಾಸ್ ಪಾಂತು (27) ಎಂಬ ಇಬ್ಬರನ್ನು ಬಂಧಿಸಲಾಗಿದೆ. ಇತರೆ ಮೂವರು ಪರಾರಿಯಾಗಿದ್ದಾರೆ.
Comments are closed.