Mahabali Frog: ಮಳೆಗಾಲಕ್ಕೆ ಬಂದ ಮಹಾಬಲಿ ಕಪ್ಪೆ: ಇದು ಶುಭ ಸೂಚನೆಯಂತೆ: ಇದು ಕಾಣಸಿಗೋದು ಎಲ್ಲಿ? ಏನಿದರ ವಿಶೇಷತೆ?

Kerala: ಮಳೆಗಾಲ ಪ್ರಾರಂಭವಾಯಿತೇಂದರೆ ಕೆಲವು ಜೀವಿಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ, ಅದರಲ್ಲಿ ಕಪ್ಪೆ ಕೂಡ ಒಂದು. ಹೀಗೆಯೇ ಕೇರಳದಲ್ಲಿ ಮೇ 28 ರಂದು ಪಾತಾಳ ಕಪ್ಪೆಗಳು ಹೊರಬಂದಿರುವುದು ಕಂಡು ಬಂದಿದೆ.

ರಾಜ್ಯದ ಎರ್ನಾಕುಲಂ ಜಿಲ್ಲೆಯ ಆಂಟೀಷನ್ ಕಾರ್ಪೊರೇಷನ್ ನ ಎಝಾಟ್ಟುಮುಖಂನಲ್ಲಿ ಜೆಸಿಬಿ ಕೆಲಸ ಮಾಡುತ್ತಿರುವಾಗ ಈ ಕಪ್ಪೆಯೊಂದು ಹೊರಬಂದಿರುವುದು ಜನರ ಕಣ್ಣಿಗೆ ಬಿದ್ದಿದ್ದು, ಇದು ವರ್ಷಕ್ಕೊಮ್ಮೆ ಮಾತ್ರವೇ ಭೂಮಿಯಿಂದ ಹೊರಬರುವುದು ಮತ್ತು ಇದನ್ನ ಪಾತಾಳ ಕಪ್ಪೆ ಹಾಗೂ ಮಹಾಬಲಿ ಎಂದು ಕೂಡ ಕರೆಯುತ್ತಾರೆ.
ಇದು 364 ದಿನವೂ ಭೂಮಿಯೊಳಗೆ ಇರುತ್ತದೆ ಹಾಗೂ ಮೊಟ್ಟೆಯಿಡಲು ಮಾತ್ರವೇ ಮೇಲೆ ಬರುವಂತದ್ದು. ಇದರ ವೈಜ್ಞಾನಿಕ ಹೆಸರು ನಾಸಿಕಬಾತ್ರಾಚಸ್ ಸಹ್ಯಡ್ರೆನ್ನಿಸ್ ಎಂದಾಗಿದೆ. ಇದು ಕೇರಳದ ಜನರ ಪಾಲಿಗೆ ಸುಭಸೂಚನೆಯಾಗಿದ್ದು, ಪ್ರತಿ ವರ್ಷವೂ ಓಣಂ ಗು ಮುಂಚೆಯೇ ಕಾಣಿಸಿಕೊಳ್ಳುತ್ತದೆ.
ಇವುಗಳು ನದಿ ಹಾಗೂ ತೊರೆ ಇನ್ನಿತರ ನೀರಿರುವ ಜಾಗದಲ್ಲಿ ವಾಸ ಮಾಡುತ್ತವೆ ಹಾಗೂ ಅಲ್ಲಿರುವ ಕ್ರಿಮಿಕೀಟಗಳನ್ನು ತಿಂದು ಬದುಕುತ್ತವೇ. ಇನ್ನು ಇದನ್ನು ರಾಜ್ಯ ಅರಣ್ಯ ಇಲಾಖೆಯ ಶಿಫಾರಸ್ಸಿನ ಮೂಲಕ ರಾಜ್ಯದ ಅಧಿಕೃತ ಕಪ್ಪೆಯೆಂದು ಘೋಷಿಸಲು ತೀರ್ಮಾನ ಕೈಗೊಳ್ಳಲಾಗಿದೆ.
Comments are closed.