Mysuru: ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ಹುಚ್ಚಾಟ: ಸಾರ್ವಜನಿಕರಿಂದ ತೀವ್ರ ಆಕ್ರೋಶ

Mysuru: ಮೈಸೂರಿನ ಕೆ.ಆರ್ ವೃತ್ತದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯ ಮೇಲೆ ವ್ಯಕ್ತಿಯೋರ್ವ ಹತ್ತಿ ಕುಳಿತು, ಒಡೆಯರ್ ಪ್ರತಿಮೆಯ ಬಾಯಿಗೆ ಬೀಡಿಯಿಟ್ಟು ಹುಚ್ಚಾಟ ನಡೆಸಿರುವ ಘಟನೆಯೊಂದು ಶುಕ್ರವಾರ ನಡೆದಿದೆ.
ಇನ್ನು ಈತನನ್ನು ಸ್ಥಳೀಯರು ತಡೆಯಲು ಪ್ರಯತ್ನಿಸಿದರೂ ಕೂಡ ಈತ ಉದ್ಧಟತನದಿಂದ ಇಳಿಯದಿದ್ದಾಗ, ಅವರು ಪೊಲೀಸ್ ಗೆ ಕರೆ ಮಾಡಿರುತ್ತಾರೆ. ಹಾಗೂ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಇನ್ನೂ ಈ ಕುರಿತಾಗಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಆರೋಪಿಗೆ ಶಿಕ್ಷೆಯಾಗಬೇಕು ಹಾಗೂ ಪ್ರತಿಮೆಗೆ ರಕ್ಷಣೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Comments are closed.