Badiyadka: ಮುಸ್ಲಿಂ ಪ್ರಿಯಕರನ ಜೊತೆ ತೆರಳಿ ನಾಪತ್ತೆಯಾಗಿದ್ದ ಪ್ರತೀಕ್ಷಾ ಪ್ರತ್ಯಕ್ಷ

Badiyadka: ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ 19 ವರ್ಷದ ಯುವತಿ ಪ್ರತೀಕ್ಷಾ ತನ್ನ ಪ್ರಿಯತನೊಂದಿಗೆ ಕಾಸರಗೋಡಿನ ಆಶಿಕ್ ಅಲಿ ಎಂಬಾತನೊಂದಿಗೆ ಪತ್ತೆಯಾಗಿದ್ದು, ಪೊಲೀಸರು ಯುವತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆಕೆಯನ್ನು ನ್ಯಾಯಾಲಯದ ಅನುಮತಿಯ ಮೇಲೆ ಪ್ರಿಯತಮನ ಜೊತೆ ಕಳುಹಿಸಲಾಗಿದೆ.

*ಮಹಾಭಾರತದ ಆಸಕ್ತಿಕರ ಕಥೆಗಳು*
‼️ *ಸ್ವರ್ಗದ ಹಾದಿಯಲ್ಲೇ ತೀರಿಕೊಂಡ ಪಾಂಡವರು*
*ಎಡೆಬಿಡದೆ ಹಿಂಬಾಲಿಸಿದ ಅವರ ನಾಯಿ ಸ್ವರ್ಗ ಸೇರಿತ್ತಾ?*
ಸ್ವರ್ಗದ ಹಾದಿಯಲ್ಲಿ ತೀರಿಕೊಂಡ ಪಾಂಡವರು, ಎಡೆಬಿಡದೆ ಹಿಂಬಾಲಿಸಿದ ಅವರ ನಾಯಿ ಸ್ವರ್ಗ ಸೇರಿತ್ತಾ?
*ನಮ್ಮ ವಾಟ್ಸಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ*
https://chat.whatsapp.com/EuwHt5yc59uDpLn5qSL718
ಮೇ 27, ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಪ್ರತೀಕ್ಷಾ ತನ್ನ ಸ್ನೇಹಿತೆಯ ಮನೆಗೆ ಹೋಗುವುದಾಗಿ ತಿಳಿಸಿ ತೆರಳಿದ್ದು, ಸಂಜೆ ಕಳೆದರೂ ಆಕೆ ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಆಕೆಯ ಮನೆ ಮಂದಿ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನು ದಾಖಲು ಮಾಡಿದ್ದರು.
ದೂರು ದಾಖಲಿಸಿಕೊಂಡ ಬದಿಯಡ್ಕ ಪೊಲೀಸರು ತನಿಖೆ ಮಾಡಿದ್ದು, ತನಿಖೆ ಪ್ರಗತಿಯಲ್ಲಿದ್ದಾಗಲೇ, ಪ್ರತೀಕ್ಷಾ, ಮತ್ತು ಆಕೆಯ ಪ್ರಿಯತಮ ಆಶಿಕ್ ಅಲಿ ಕಾಸರಗೋಡು ನಗರ ಪೊಲೀಸ್ ಠಾಣೆಗೆ ಸ್ವಯಂಪ್ರೇರಿತರಾಗಿ ಹಾಜರಾಗಿದ್ದಾರೆ ಎಂದು ವರದಿಯಾಗಿದೆ. ಕೂಡಲೇ ಬದಿಯಡ್ಕ ಪೊಲೀಸರು ಕಾಸರಗೋಡಿಗೆ ತೆರಳಿ ಪ್ರತೀಕ್ಷಾ ಹೇಳಿಕೆ ಪಡೆದುಕೊಂಡಿದ್ದು, ನಂತರ ಕಾನೂನು ಪ್ರಕ್ರಿಯೆಯಂತೆ ಸ್ಥಳೀಯ ನ್ಯಾಯಾಲಯಕ್ಕೆ ಆಕೆಯನ್ನು ಹಾಜರುಪಡಿಸಿದ್ದರು.
ವಿಶ್ವದ ಮೊದಲ ವೀರ್ಯಾಣು ರೇಸ್!
ಹೇಗಿತ್ತು ಗೊತ್ತಾ ಸ್ಪರ್ಧೆ, ಗೆದ್ದವರು ಯಾರು?
ಚಿಯರ್ ಗರ್ಲ್ಸ್ ಕಲರವದ ಮಧ್ಯೆ ಎಗರಿ ಓಡಿದ ವೀರ್ಯಾಣುಗಳು
ವಿಶ್ವದ ಮೊದಲ ವೀರ್ಯಾಣು ರೇಸ್! ಹೇಗಿತ್ತು ಗೊತ್ತಾ ಸ್ಪರ್ಧೆ, ಗೆದ್ದವರು ಯಾರು?
ವಿಚಾರಣೆಯ ನಂತರ ಪ್ರತೀಕ್ಷಾ ತನ್ನ ಸ್ವ ಇಚ್ಛೆಯಂತೆ ಆಶಿಕ್ ಅಲಿ ಜೊತೆ ತೆರಳಲು ಬಯಸಿರುವುದಾಗಿ ತಿಳಿಸಿದ್ದಾಳೆ. ಇದನ್ನು ಪರಿಗಣಿಸಿದ ನ್ಯಾಯಾಲಯವು ಆಕೆಗೆ ಪ್ರಿಯಕರನೊಂದಿಗೆ ತೆರಳಲು ಅನುಮತಿ ನೀಡಿದೆ. ಹೀಗಾಗಿ ಪ್ರತೀಕ್ಷಾ, ಆಶಿಕ್ ಅಲಿಯೊಂದಿಗೆ ತೆರಳಿದ್ದಾಳೆ ಎಂದು ವರದಿಯಾಗಿದೆ.
Comments are closed.