Supreme Court: ಅಂಗವಿಕಲರ ಮಧ್ಯೆ ತಾರತಮ್ಯ ಸಲ್ಲ : ಎಲ್ಲರೂ ಒಂದೇ – ಸುಪ್ರೀಮ್ ಕೋರ್ಟ್

Supreme Court : ದಿವ್ಯಾಂಗರಿಗೆ ಅವರ ನ್ಯೂನ್ಯತೆ ಪರಿಗಣಿಸಿ ಅವರಿಗೆ ಉದ್ಯೋಗ, ಮೀಸಲಾತಿ, ಸಹಾಯಧನ ನೀಡಲಾಗುತ್ತಿತ್ತು. ಆದರೆ ಅಂಗವೈಕಲ್ಯದ ಸ್ವರೂಪವನ್ನು ಆಧರಿಸಿ ನಿವೃತ್ತಿ ವಯಸ್ಸನ್ನು ನಿಗದಿಪಡಿಸುವುದು ಸಂವಿಧಾನದ 14ನೇ ವಿಧಿಯ ಅಡಿಯಲ್ಲಿ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ವಿಕಲಾಂಗ ವ್ಯಕ್ತಿಗಳ ನಡುವೆ ಮಾಡುತ್ತಿರುವ ತಾರತಮ್ಯ ಸಂವಿಧಾನದಲ್ಲಿ ಪ್ರತಿಪಾದಿಸಿರುವ ತತ್ವಗಳನ್ನು ಉಲ್ಲಂಘಿಸುತ್ತವೆ. ನಿವೃತ್ತಿ ವಯಸ್ಸು ಸೇರಿದಂತೆ ಎಲ್ಲಾ ಮಾನದಂಡದ ವಿಕಲಾಂಗರಿಗೆ ಸಮಾನ ಸೇವಾ ಸೌಲಭ್ಯ ನೀಡಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ಹಿಮಾಚಲ ಪ್ರದೇಶ ರಾಜ್ಯ ವಿದ್ಯುತ್ ಮಂಡಳಿಯು 58ನೇ ವಯಸ್ಸಿನಲ್ಲಿ ಕಡ್ಡಾಯವಾಗಿ ನಿವೃತ್ತಿ ಹೊಂದಬೇಕು ಎಂಬ ನಿಯಮವಿದೆ. ಅದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಮನೋಜ್ ಮಿಶ್ರಾ ಮತ್ತು ನ್ಯಾ.ಕೆ.ವಿ ವಿಶ್ವನಾಥನ್ ಅವರ ಪೀಠವು ಎಲ್ಲಾ ವಿಕಲಾಂಗರಿಗೂ ಸಮಾನ ಸ್ಥಾನಮಾನ ನೀಡಬೇಕು ಎಂದು ಹೇಳಿದೆ.
ಶೇ.60ರಷ್ಟು ಅಂಗವಿಕಲರಾಗಿರುವ ಎಲೆಕ್ನಿಷಿಯನ್ ಒಬ್ಬರು ಈ ಅರ್ಜಿ ಸಲ್ಲಿಸಿದ್ದರು. ಅವರನ್ನು ಹಿಮಾಚಲ ಪ್ರದೇಶ ರಾಜ್ಯ ವಿದ್ಯುತ್ ಮಂಡಳಿಯು 58 ವರ್ಷಕ್ಕೆ ನಿವೃತ್ತಿಗೊಳಿಸಿತು. ಆದರೂ ದೃಷ್ಟಿಹೀನ ಉದ್ಯೋಗಿಗಳು 60 ವರ್ಷಗಳವರೆಗೆ ಕೆಲಸ ಮಾಡಬಹುದು ಎಂದು ಕೋರ್ಟ್ ಮಹತ್ವದ ತೀರ್ಪು ನೀಡಿದೆ.
Comments are closed.