Mangalore: ಮಂಗಳೂರು ಗುಡ್ಡ ಕುಸಿತದಲ್ಲಿ ಎರಡೂ ಕಾಲು ಕಳೆದುಕೊಂಡ ತಾಯಿ

Share the Article

Dakshina Kannada: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಮಂಜನಾಡಿಯ ಮೊಂಟೆಪದವು ಎಂಬಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಅದರಲ್ಲಿ ಗಾಯಗೊಂಡಿದ್ದಂತಹ ಅಶ್ವಿನಿ ಪೂಜಾರಿ ಅವರ ಎರಡು ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದರಿಂದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಅಶ್ವಿನಿಯವರ ಎರಡೂ ಕಾಲುಗಳನ್ನು ತೆಗೆದಿದ್ದಾರೆ. ಅವರ ಒಂದು ಕಾಲಿನ ಪಾದದ ಭಾಗ ಕಟ್​​​ ಆಗಿದ್ದು, ಮತ್ತೊಂದು ಪೂರ್ತಿ ಕಾಲು ಕತ್ತರಿಸಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಅಶ್ವಿನಿ ಅವರಿಗೆ ತನ್ನ ಇಬ್ಬರು ಮಕ್ಕಳು ಮೃತಪಟ್ಟಿರುವ ವಿಚಾರವನ್ನು ಇನ್ನು ತಿಳಿಸಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದು, ಮೃತಪಟ್ಟ ಅಜ್ಜಿ ಹಾಗೂ ಮೊಮ್ಮಕ್ಕಳ ಅಂತ್ಯಸಂಸ್ಕಾರವನ್ನು ಮನೆಯ ಪಕ್ಕದಲ್ಲೇ ನೆರವೇರಿಸಲಾಗಿದೆ.

ಈ ಘಟನೆಯು ಶುಕ್ರವಾರ ಬೆಳಗಿನ ಜಾವ ಸುಮಾರು 4:30 ರಲ್ಲಿ ನಡೆದಿದ್ದು, ಕಾಂತಪ್ಪ ಪೂಜಾರಿ ಎಂಬುವರ ಮನೆಯ ಮೇಲೆ ಗುಡ್ಡ ಕುಸಿದಿದ್ದು, ಅವರು ತಮ್ಮ ಎರಡು ಕಾಲುಗಳನ್ನು ಕಳೆದುಕೊಂಡಿರುತ್ತಾರೆ. ಇನ್ನೂ ಮನೆ ಕುಸಿದು ಕಾಂತಪ್ಪ ಪೂಜಾರಿ ಪತ್ನಿ ಪ್ರೇಮಾ ಮೃತಪಟ್ಟಿದ್ದು, ಕಾಂತಪ್ಪ ಪೂಜಾರಿಯವರ ಪುತ್ರ ಸೀತಾರಾಮ್ ಪೂಜಾರಿ ಮತ್ತು ಸೊಸೆ ಅಶ್ವಿನಿ ಪಾರಾಗಿದ್ದರು. ಆದರೆ, ಸೀತಾರಾಮ್ ಪೂಜಾರಿ ಮತ್ತು ಅಶ್ವಿನಿ ಪೂಜಾರಿ ದಂಪತಿಯ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಅಜ್ಜಿ ಪ್ರೇಮಾ ಪೂಜಾರಿ, ಮೊಮ್ಮಕ್ಕಳಾದ ಆರ್ಯನ್ ಮತ್ತು ಆರುಷ್​ ಮೃತರಾದವರಾಗಿದ್ದಾರೆ.

Comments are closed.