ವೆಲ್ ನೆಸ್ ಆಫೀಸರ್ ಆಗಿ ನಾಯಿಯನ್ನು ನೇಮಿಸಿದ ಟೆಕ್ ಕಂಪನಿ- ಮೊದಲ ದಿನದ ಕೆಲಸ ಕಂಡು ಬೆಚ್ಚಿಬಿದ್ದ ಮ್ಯಾನೇಜ್ಮೆಂಟ್!

ಟೆಕ್ ಕಂಪನಿಯೊಂದು ತನ್ನ ಚೀಫ್ ವೆಲ್ ನೆಸ್ ಆಫೀಸರ್ ಆಗಿ ಶ್ವಾನವನ್ನು ನೇಮಿಸಿದೆ.

Share the Article

ಹೈದರಾಬಾದ್: ಹೈದರಾಬಾದಿನ ಟೆಕ್ ಕಂಪನಿಯೊಂದು ತನ್ನ ಚೀಫ್ ವೆಲ್ ನೆಸ್ ಆಫೀಸರ್ ಆಗಿ ನಾಯಿಯನ್ನು ನೇಮಿಸಿದೆ. ಇಲ್ಲಿನ ಹಾರ್ವೆಸ್ಟಿಂಗ್ ರೊಬೊಟಿಕ್ಸ್ ಎಂಬ ಟೆಕ್ ಕಂಪನಿ ತಮ್ಮ ಸಂಸ್ಥೆಯ ಮುಖ್ಯ ಸಂತೋಷ ಅಧಿಕಾರಿಯಾಗಿ ಗೋಲ್ಡನ್ ರಿಟ್ರೈವರ್ ಶ್ವಾನವನ್ನು ನೇಮಿಸಿಕೊಂಡಿದ್ದಕ್ಕಾಗಿ ವೈರಲ್ ಆಗಿದೆ. ಕಂಪನಿಯ ಉದ್ಯೋಗಿಗಳ ಕೆಲಸದ ಒತ್ತಡವನ್ನು ಓಡಿಸುವುದು, ಸಂತೋಷವನ್ನು ಹರಡುವುದು ಈ ಹೊಸ ಚೀಫ್ ವೆಲ್ ನೆಸ್ ಆಫೀಸರ್ ನ ಕೆಲಸ! ಹೊಸ ಹುದ್ದೆಗೆ ಅಪಾಯಿಂಟ್ ಮೆಂಟ್ ಆಗಿ, ಆಪಾಯಿಂಟ್ ಮೆಂಟ್ ಲೆಟರ್ ಕೈಗೆ ಸಿಗುತ್ತಲೇ, ಡೆನ್ವರ್ ಎಂಬ ಈ ಶ್ವಾನ ಕೆಲಸ ಶುರು ಹಚ್ಚಿಕೊಂಡಿದೆ. ಅದರ ಮೊದಲ ದಿನದ ಪರ್ಫಾರ್ಮೆನ್ಸ್ ನೋಡಿ ಮ್ಯಾನೇಜ್ ಮೆoಟ್ ಅಕ್ಷರಶ: ಬೆಚ್ಚಿ ಬಿದ್ದಿದೆ!

Covid Guidelines: ಕರ್ನಾಟಕದಲ್ಲಿ ಕೊರೊನಾ ಆಕ್ಟೀವ್‌: ಆರೋಗ್ಯ ಇಲಾಖೆಯಿಂದ ಶಾಲೆಗಳಿಗೆ ಮಾರ್ಗಸೂಚಿ ಪ್ರಕಟ

ಕಾರ್ಪೊರೇಟ್ ಜೀವನಕ್ಕೆ ಒಂದು ಹೃದಯಸ್ಪರ್ಶಿ ತಿರುವು ನೀಡಲು ಹೈದರಾಬಾದ್’ನ ಸ್ಟಾರ್ಟ್ಅಪ್ ಕಂಪನಿ ಡೆನ್ವರ್ ಎಂಬ ಗೋಲ್ಡನ್ ರಿಟ್ರೈವರ್’ನ್ನು ತನ್ನ ಮುಖ್ಯ ಸಂತೋಷ ಅಧಿಕಾರಿಯಾಗಿ ನೇಮಿಸಿಕೊಂಡಿದೆ. ಅದು ತನ್ನ ಬಾಲದ ಅಲೆಗಳಿಂದ ಟೆಕ್ ಕಚೇರಿ ಸಂಸ್ಕೃತಿಯನ್ನು ಮರು ವ್ಯಾಖ್ಯಾನಿಸುತ್ತಿದೆ ಎಂದು ಹೇಳಲಾಗಿದೆ. ಈ ರೋಮ ಭರಿತ ವ್ಯಕ್ತಿಯ ನೇಮಕಾತಿ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಉಲ್ಲಾಸದ ಅಲೆಗಳನ್ನು ಸೃಷ್ಟಿಸುತ್ತಿದೆ!

ಹೈದರಾಬಾದ್ ಮೂಲದ ಈ ನವೋದ್ಯಮವು ರೈತರಿಗೆ ಸುಸ್ಥಿರವಾದ ಲೇಸರ್ ಆಧಾರಿತ ಕಳೆ ಕೀಳುವ ತಂತ್ರಜ್ಞಾನವನ್ನು ನಿರ್ಮಿಸುವತ್ತ ಗಮನಹರಿಸಿದ ಕಂಪನಿ. ಹಾರ್ವೆಸ್ಟಿಂಗ್ ರೊಬೊಟಿಕ್ಸ್ ಎಂಬ ಈ ಕಂಪನಿ ಗೋಲ್ಡನ್ ರಿಟ್ರೈವರ್ ಡೆನ್ವರ್ ನ್ನು ತನ್ನ ಮುಖ್ಯ ಸಂತೋಷ ಅಧಿಕಾರಿ (CHO) ಆಗಿ ಪರಿಚಯಿಸಿದ ನಂತರ ವೈರಲ್ ಆಗಿದೆ. ಲಿಂಕ್ಡ್‌ಇನ್‌ನಲ್ಲಿ ಅದರ ಸಹ-ಸಂಸ್ಥಾಪಕ ರಾಹುಲ್ ಅರೆಪಾಕ ಮಾಡಿದ ಘೋಷಣೆಯ ಸುದ್ದಿಯು ಇಂಟರ್ನೆಟ್‌ನಾದ್ಯಂತ ತಕ್ಷಣವೇ ಲಕ್ಷಾಂತರ ಹೃದಯಗಳನ್ನು ಗೆದ್ದಿದೆ.

Tulsi: ತುಳಸಿ ಗಿಡ ಚೆನ್ನಾಗಿ ಬೆಳೆಯಲು ಇಲ್ಲಿದೆ ಸುಲಭ ಪರಿಹಾರ

ಸಹ-ಸಂಸ್ಥಾಪಕ ರಾಹುಲ್ ಅರೆಪಾಕ ಬರಹ: 

“ನಮ್ಮ ಹೊಸ ನೇಮಕವಾದ ಡೆನ್ವರ್ – ಮುಖ್ಯ ಸಂತೋಷ ಅಧಿಕಾರಿಯನ್ನು ಭೇಟಿ ಮಾಡಿ. ಅವನು ಕೋಡ್ ಮಾಡುವುದಿಲ್ಲ. ಅವನಿಗೆ ಯಾವುದೇ ಚಿಂತೆಯಿಲ್ಲ. ಅವನು ಬರುತ್ತಾನೆ, ಹೃದಯಗಳನ್ನು ಕದಿಯುತ್ತಾನೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತಾನೆ. ಅಲ್ಲದೆ, ನಾವು ಈಗ ಅಧಿಕೃತವಾಗಿ ಈಗ ಸಾಕುಪ್ರಾಣಿ ಸ್ನೇಹಿಯಾಗಿದ್ದೇವೆ. ಉತ್ತಮ ನಿರ್ಧಾರ. ನೆನಪಿಡಿ: ಅವನಿಗೆ ಕಂಪನಿಯಲ್ಲಿ ಅತ್ಯುತ್ತಮ ಸವಲತ್ತುಗಳಿವೆ.”

ಡೆನ್ವರ್ ಕೆಲಸಕ್ಕೆ ಸೇರಿದ ಒಂದೇ ದಿನದಲ್ಲಿ ವರ್ಕ್ ಪ್ಲೇಸ್ ನಲ್ಲಿ ವ್ಯಾಪಕ ಚೈತನ್ಯ ತುಂಬಿದ್ದು, ಕೆಲಸದ ಸ್ಥಳ ನೂರಕ್ಕೆ ನೂರು ತಂಪಾಗಿದೆ ಎನ್ನಲಾಗಿದೆ. ಮೊದಲೇ ಗೋಲ್ಡನ್ ರಿಟ್ರೀವರ್ ನಾಯಿ ಅತ್ಯಂತ ಸಾಧು ಮತ್ತು ವಿಧೇಯದ ಶ್ವಾನ. ಕಂಪನಿಯ ಉದ್ಯೋಗಿಗಳನ್ನು ಸ್ವಾಗತಿಸುವುದು, ಅಲ್ಲೊಮ್ಮೆ ಇಲ್ಲೊಮ್ಮೆ ತನ್ನ ಬೆನ್ನನ್ನು ಅವರ ಕಾಲುಗಳಿಗೆ ಉಜ್ಜಿ ಸಾಂತ್ವನ ಮಾಡೋದು, ಬಳಲಿ ಮನೆಗೆ ಹೊರಡುವ ಉದ್ಯೋಗಿಗಳಿಗೆ ಬಾಲದಿಂದಲೇ ಟಾಟಾ ಮಾಡಿ ಕಳಿಸೋದು ಆತನ ಕೆಲಸ. ಅದೂ ಬೆಳಗಿನ ಸಮಯಗಳಲ್ಲಿ ಆತ ಅತ್ಯಂತ ಉತ್ಸಾಹಿ. ಡೆನ್ವರ್ ಕೆಲಸಕ್ಕೆ ಸೇರಿದ ಮೊದಲ ದಿನದಲ್ಲೇ ಕಂಪನಿಯ ಕೆಲಸದ ಸಂಸ್ಕೃತಿಯಲ್ಲಿ ಬದಲಾವಣೆ ತಂದಿದ್ದು ಉದ್ಯೋಗಿಗಳು ಖುಷಿಯಾಗಿದ್ದಾರಂತೆ. ಉಳಿದ ಸಮಯ, ಯಾವುದೋ ಧ್ಯಾನದಲ್ಲಿ ಆಫೀಸಿನ ತಣ್ಣಗಿನ ಮಾರ್ಬಲ್ ನೆಲದ ಮೇಲೆ ಪುಟಾಣಿ ನಿದ್ರೆಗೆ ಜಾರುವುದು ಡೆನ್ವರ್ ನ ದಿನಚರಿ. ಒಟ್ಟಾರೆ ಡೆನ್ವರ್ ಕೆಲಸಕ್ಕೆ ಸೇರಿದ ಮೊದಲ ದಿನದಲ್ಲೇ ಕಂಪನಿಯ ಕೆಲಸದ ಸಂಸ್ಕೃತಿಯಲ್ಲಿ ಬದಲಾವಣೆ ತಂದಿದ್ದು ಉದ್ಯೋಗಿಗಳು ಖುಷಿಯಾಗಿದ್ದಾರಂತೆ.

SSLC ಯಲ್ಲಿ ಶೇ 60ಕ್ಕಿಂತ ಕಡಿಮೆ ಫಲಿತಾಂಶ ಬಂದ ಜಿಲ್ಲೆಗಳ DDPI ಗಳಿಗೆ ನೋಟಿಸ್‌

Comments are closed.