ಸಂಪಾಜೆ: ಮಳೆಯ ನಡುವೆಯೇ ತೋಟಕ್ಕೆ ನುಗ್ಗಿ ಕೃಷಿ ಧ್ವಂಸಗೈದ ಆನೆ ಹಿಂಡು! ಸುಳಿಯದ ಅರಣ್ಯ ಇಲಾಖೆ, ಜಿಲ್ಲಾಡಳಿತ!

ಹೆಂಗಸರ ಕೈಗೆ ಗರ್ನಲ್ ಕೊಟ್ಟು ಆನೆ ಬೆನ್ನಿಗೆ ಎಸೆಯಿರಿ ಎಂದು ಹೇಳಿ ಹೋದ ಅರಣ್ಯ ಅಧಿಕಾರಿಗಳು

Share the Article

ಸಂಪಾಜೆ: ಮಳೆಯ ನಡುವೆಯೇ ತೋಟಕ್ಕೆ ನುಗ್ಗಿ ಕೃಷಿ ಸಂಪೂರ್ಣ ಧ್ವಂಸಗೈದ ಆನೆ ಹಿಂಡು! ಸುಳಿಯದ ಅರಣ್ಯ ಇಲಾಖೆ, ಜಿಲ್ಲಾಡಳಿತ!

 

ಹೆಂಗಸರ ಕೈಗೆ ಗರ್ನಲ್ ಕೊಟ್ಟು ಆನೆಯ ಬೆನ್ನಿಗೆ ಬಿಸಾಡುವಂತೆ ಹಿಂದೆ ಪುಕ್ಕಟೆ ಸಲಹೆ ಕೊಟ್ಟು ತೆರಳಿದ್ದ ಅರಣ್ಯ ಇಲಾಖೆ!

ಸಂಪಾಜೆ: ರಣಭೀಕರ ಮಳೆಯ ನಡುವೆಯೇ ಬಡ ಕೃಷಿಕರೋರ್ವರ ಕೃಷಿ ತೋಟಕ್ಕೆ ರಾತ್ರಿ ವೇಳೆ ನಿರಂತರವಾಗಿ ಆನೆಗಳ ಹಿಂಡು ಧಾಳಿ ನಡೆಸಿ ಕೃಷಿ ಬೆಳೆಗಳನ್ನು ದ್ವಂಸಗೈಯ್ಯುತ್ತಿರುವ ಬಗ್ಗೆ ಆ ಬಡ ಕುಟುಂಬ ಸಂಬಂಧಪಟ್ಟ ಇಲಾಖೆಗಳಿಗೆ ಅರ್ಜಿ, ಮನವಿಗಳನ್ನು ನೀಡಿದರೂ ಸಹಾ ಈವರೆಗೂ ಸಂಬಂಧಪಟ್ಟ ಯಾವೊಬ್ಬ ಅಧಿಕಾರಿಗಳೂ ಅತ್ತ ಕಡೆ ಸುಳಿಯದೆ ಬಡ ಕುಟುಂಬದ ಬಗ್ಗೆ ನಿರ್ಲಕ್ಷ ತೋರುತ್ತಿರುವ ಘಟನೆ ಸಂಪಾಜೆ ಗ್ರಾಮದ ಕೊಯನಾಡಿನ ಗುಡ್ಡೆಗದ್ದೆ ಎಂಬಲ್ಲಿ ನಡೆಯುತ್ತಿದೆ.

ಸಂಪಾಜೆ ಗ್ರಾಮದ ಗುಡ್ಡೆಗದ್ದೆ ನಿವಾಸಿ ಸಿದ್ದಮ್ಮ ಮಲೆಕುಡಿಯ ಎಂಬವರ ಸುಮಾರು ಒಂದೂವರೆ ಎಕ್ರೆ ಕೃಷಿ ಜಾಗವಿದ್ದು ಹಲವಾರು ವರ್ಷಗಳಿಂದಲೂ ಈ ಜಾಗದಲ್ಲಿ ಅವರು ಅಡಿಕೆ,ಕಾಫಿ, ಕೊಕ್ಕೋ,ಬಾಳೆ ಹಾಗೂ ಇನ್ನಿತರ ಕೃಷಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ ಇವರ ಕೃಷಿ ಭೂಮಿ ಮಡಿಕೇರಿ ಮೀಸಲು ರಕ್ಷಿತಾರಣ್ಯಕ್ಕೆ ಹೊಂದಿಕೊಂಡೇ ಇರುವುದರಿಂದ ವರ್ಷಂ ಪ್ರತಿ ಆನೆಗಳ ಹಿಂಡು ನಿರಂತರವಾಗಿ ಈ ಕೃಷಿ ತೋಟದೊಳಗೆ ನುಗ್ಗಿ ದಾಂಧಲೆ ನಡೆಸು ತ್ತಿರುವುದರಿಂದ ಕೃಷಿ ಬೆಳಗೆಳೆಲ್ಲ ಸಂಪೂರ್ಣ ನಾಶವಾಗಿ ಈಗ ಖಾಲಿ ತೋಟವಾಗಿದೆ. ಸಿದ್ದಮ್ಮ ಸೇರಿದಂತೆ ಅವರ ಗಂಡ ಅನಾರೋಗ್ಯ ಹೊಂದಿದ್ದು ಓರ್ವ ವಿಕಲ ಚೇತನ ಪ್ರಾಯಸ್ತೆ ಸೇರಿದಂತೆ ಎರಡು ಸಣ್ಣ ಹೆಣ್ಣು ಮಕ್ಕಳಿರುವ ಈ ಬಡ ಕುಟುಂಬ ಈ ಅಳಿದುಳಿದ ಕೃಷಿ ಬೆಳೆಗಳನ್ನೇ ನಂಬಿಕೊಂಡು ಜೀವನ ನಿರ್ವಹಿಸುತ್ತಿವೆ. ಹೀಗಾಗಿ ಆನೆಗಳು ಹಾಗೂ ಇನ್ನಿತರ ಕಾಡು ಪ್ರಾಣಿಗಳ ಹಾವಳಿ ತಡೆಯಲು ಕೃಷಿ ತೋಟದ ಸುತ್ತ ಆನೆ ಕಂದಕ ಅಥವಾ ಸೋಲಾರ್ ಬೇಲಿ ಅಳವಡಿಸುವಂತೆ ಈ ಬಡ ಕುಟುಂಬ ಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿಯ ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಹಲವಾರು ವರ್ಷಗಳಿಂದ ಅದೆಷ್ಟೋ ಅರ್ಜಿ ನೀಡಿದ್ದರಾದರೂ ಈವರೆಗೂ ಅವರ ಮನವಿಗೆ ಮುಖ್ಯಮಂತ್ರಿಗಳಾಗಲಿ ಜಿಲ್ಲಾಡಳಿತವಾಗಲಿ ಅಥವಾ ಅರಣ್ಯ ಇಲಾಖೆಯಾಗಲಿ ಸ್ಪಂದಿಸಿರುವುದಿಲ್ಲ. ಇದರಿಂದ ವರ್ಷಂಪ್ರತಿ ಬೇಸಿಗೆ, ಮಳೆಗಾಲವೆನ್ನದೆ ಆನೆಗಳು ಹಾಗೂ ಇತರ ಕಾಡು ಪ್ರಾಣಿಗಳು ನಿರಂತರವಾಗಿ ದಾಳಿ ನಡೆಸುತ್ತಾ ಕೃಷಿ ಬೆಳೆಗಳ ಜೊತೆಗೆ ಇವರ ವಾಸದ ಗುಡಿಸಲುಗಳನ್ನೂ ಸಹಾ ಧ್ವಂಸಗೈಯ್ಯುತ್ತಾ ಜೀವಕ್ಕೆ ಅಪಾಯ ತಂದೊಡ್ಡಲೆತ್ನಿ ಸುತ್ತವೆ ಎನ್ನಲಾಗುತ್ತಿದೆ.

ಇದರಂತೆ ಮೊನ್ನೆ ಮಳೆಗಾಲ ಆರಂಭವಾದ ದಿನದಿಂದ ನಿರಂತರವಾಗಿ ರಾತ್ರಿ ಆನೆಗಳ ಹಿಂಡು ಇವರ ತೋಟದೊಳಕ್ಕ ನುಗ್ಗಿ ಅಳಿದುಳಿದ ಕೃಷಿ ಬೆಳೆಗಳನ್ನು ಸಹ ಸಂಪೂರ್ಣ ಧ್ವಂಸಗೈದಿದೆ ಎನ್ನಲಾಗುತ್ತಿದೆ. ಹೀಗಾಗಿ ಅವರು ಫೋಟೋಗಳ ಸಹಿತ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಮೊನ್ನೆಯಿಂದ ಮನವಿ ಅರ್ಜಿಗಳನ್ನು ನೀಡುತ್ತಾರಾದರೂ ಈವರೆಗೂ ಯಾವೊಬ್ಬ ಅಧಿಕಾರಿಯೂ ಅತ್ತ ಕಡೆ ಸುಳಿದಾಡಿಲ್ಲ ಎನ್ನಲಾಗಿದೆ.

ಹೆಂಗಸರ ಕೈಗೆ ಗರ್ನಲ್ ಕೊಟ್ಟು ಆನೆ ಬೆನ್ನಿಗೆ ಎಸೆಯಿರಿ ಎಂದು ಹೇಳಿ ಹೋದ ಅರಣ್ಯ ಅಧಿಕಾರಿಗಳ

ಈ ಬಡ ಕುಟುಂಬ ತಮ್ಮ ತೋಟದ ಸುತ್ತ ಆನೆ ಕಂದಕ ಅಥವಾ ಸೋಲಾರ್ ಬೇಲಿಯನ್ನಾದರೂ ರಚಿಸಿ ಕೊಡುವಂತೆ ಹಲವು ವರ್ಷಗಳಿಂದಲೂ ಅದೆಷ್ಟೋ ಬಾರಿ ಅರ್ಜಿ ಮನವಿಗಳನ್ನು ಸ್ಥಳೀಯ ಅರಣ್ಯಾಧಿಕಾರಿಗಳಿಂದ ಹಿಡಿದು ಮುಖ್ಯಮಂತ್ರಿಯಾದಿಯಾಗಿ ರಾಜ್ಯ ಅರಣ್ಯಸಚಿವರು ಹಾಗೂ ರಾಜ್ಯ ಅರಣ್ಯಾಧಿಕಾರಿಗಳವರೆಗೆ ನೀಡುತ್ತಲೇ ಬಂದಿದೆ. ಈವರೆಗೂ ಅರಣ್ಯ ಇಲಾಖೆ ಇವರ ಮನವಿಗೆ ಸ್ಪಂದಿಸುವ ಬದಲು ಮೇಲಾಧಿಕಾರಿಗಳು ಸ್ಥಳೀಯ ಅಧಿಕಾರಿಗಳನ್ನು ಗರ್ನಲ್ ನೊಂದಿಗೆ ಇವರ ಮನೆಗೆ ಕಳುಹಿಸಿ ಹೆಂಗಸರ ಕೈಯಲ್ಲಿ ಗರ್ನಲ್ ಕೊಟ್ಟು ರಾತ್ರಿ ವೇಳೆ ಆನೆಗಳು ಬರುವಾಗ ಆನೆಗಳ ಬೆನ್ನಿಗೆ ಎಸೆಯಿರಿ ಎಂದು ಪುಕ್ಕಟೆ ಸಲಹೆಯನ್ನು ಕೊಡಿಸುತ್ತಾರೆನ್ನಲಾಗಿದೆ.

Comments are closed.