Sindu Water: ರಾಜಕೀಯದ ಮಧ್ಯೆ ಸಿಂಧೂ ನೀರನ್ನು ತರಬೇಡಿ- ಪಾಕಿಸ್ತಾನ ಸಿಎಂ ಭಾರತಕ್ಕೆ ಖಡಕ್ ಎಚ್ಚರಿಕೆ

Share the Article

Sindu water: ಆಪರೇಷನ್ ಸಿಂಧೂರ ನಡೆಸಿ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸಿತ್ತು. ಅಲ್ಲದೆ ಪಾಕಿಸ್ತಾನದ ಜೀವಜಲ ಸಿಂಧೂ ನೀರನ್ನು ನಿಲ್ಲಿಸಿ ಇನ್ನಷ್ಟು ಪಾಪಿ ಪಾಕ್ ನ ಕುಕೃತ್ಯಗಳಿಗೆ ಕಡಿವಾಣ ಹಾಕಿದೆ. ಆದರೆ ಭಾರತದ ನೀರನ್ನು ಆಯುಧವಾಗಿ ಬಳಸಲು ಪ್ರಯತ್ನಿಸುತ್ತಿದೆ. ಆದರೆ ನಾವು ಇದನ್ನು ಮಾಡಲು ಬಿಡುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಎಚ್ಚರಿಕೆ ನೀಡಿದ್ದಾರೆ.

ತಜಿಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ನಡೆದ ಹಿಮನದಿಗಳ ಸಂರಕ್ಷಣೆ ಕುರಿತ ಮೂರು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡುವಾಗ ಷರೀಫ್ ಅವರು ಸಿಂಧೂ ಜಲ ಒಪ್ಪಂದದ (IWT) ವಿಷಯವನ್ನು ಪ್ರಸ್ತಾಪಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿರಿಸಿ ಲಕ್ಷಾಂತರ ಮಂದಿಯ ಜೀವವನ್ನು ಅಪಾಯಕ್ಕೆ ಸಿಲುಕಿಸಲು ಭಾರತಕ್ಕೆ ಅವಕಾಶ ನೀಡುವುದಿಲ್ಲ. ಒಪ್ಪಂದದ ಎಲ್ಲೆಯನ್ನು ಮೀರಲು ನಾವು ಎಂದಿಗೂ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಭಾರತವು ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿರಿಸುವ ನಿರ್ಧಾರ ತೆಗೆದುಕೊಂಡಿತ್ತು. ಸಿಂಧೂ ನದಿ ಜಲಾನಯನ ಪ್ರದೇಶದ ಆರು ಪ್ರಮುಖ ನದಿಗಳ ನೀರನ್ನು ಹಂಚಿಕೊಳ್ಳಲು ಮತ್ತು ತಮ್ಮ ನಡುವಿನ ನೀರಿನ ವಿವಾದವನ್ನು ಬಗೆಹರಿಸಲು ಎರಡೂ ದೇಶಗಳು 1960ರಲ್ಲಿ ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಿದ್ದೆವು.

Comments are closed.