Covid-19: ಈ 5 ದೇಶಗಳಲ್ಲಿ ಕೋವಿಡ್ ಹೆಚ್ಚಳ: ಸದ್ಯಕ್ಕೆ ಇಲ್ಲಿಗೆ ಪ್ರಯಾಣ ಬೇಡ

Share the Article

Delhi: ಈ ತಿಂಗಳ ಅಂಕಿ ಅಂಶಗಳ ಪ್ರಕಾರ ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿದ್ದು, NB.1.8.1 ಎಂಬ ರೂಪಾಂತರವು ವಿವಿಧ ದೇಶಗಳಲ್ಲಿ ಅತಿಯಾಗಿ ಹರಡುತ್ತಿದೆ ಎಂದು ವರದಿಯಾಗಿದೆ.

ಈ ರೂಪಾಂತರವು ಚೀನಾದಲ್ಲಿ ಅತಿಯಾಗಿ ಹರಡುತ್ತಿದ್ದು, ಈ ರೂಪಾಂತರವು ಜಾಗತಿಕವಾಗಿ ವೇಗವಾಗಿ ಹರಡುತ್ತಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆ ಇಲ್ಲಿಗೆ ಪ್ರಯಾಣ ಮಾಡುವವರಿಗೆ ಎಚ್ಚರಿಕೆ ನೀಡಿದೆ. ಹಾಗೂ ನೂರಾರು ಹೊಸ ಪ್ರಕರಣಗಳು ಸಿಂಗಾಪುರದಲ್ಲಿ ವರದಿಯಾಗುತ್ತಿದ್ದು, ಕಳೆದ ವಾರದ ಅಂಕಿಅಂಶಗಳ ಪ್ರಕಾರ ದಿನಕ್ಕೆ ಸರಾಸರಿ 225 ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆದರೆ ಈಗ ಅದು 350ಕ್ಕೆ ಏರಿದ್ದು, ದಿನಕ್ಕೆ ಸರಾಸರಿ ಐಸಿಯು ಪ್ರಕರಣಗಳು ಒಂಬತ್ತಕ್ಕೆ ಏರಿದೆ ಎಂದು ತಿಳಿದುಬಂದಿದೆ.

ತೈವಾನ್ನಲ್ಲಿ ಕೂಡ ಕೋವಿಡ್ ಹರಡುವಿಕೆ ಹೆಚ್ಚಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುವಂತಹ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಇನ್ನೂ ತೈವಾನ್‌ಗೆ ಹೋಗುವವರು ಅಲ್ಲಿನ ನಿರ್ಬಂಧಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಇನ್ನೂ ಹಾಂಗ್ ಕಾಂಗ್‌ನಲ್ಲೂ ಕೋವಿಡ್ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ವರದಿಯಾಗಿದೆ. ಇದರಿಂದ ಆರೋಗ್ಯ ಕ್ಷೇತ್ರ ಮತ್ತೆ ಒತ್ತಡಕ್ಕೆ ಸಿಲುಕಿದ್ದು,ಸರ್ಕಾರವು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕ್ರಮಗಳು ಮತ್ತು ಪ್ರಯಾಣ ನಿರ್ಬಂಧಗಳನ್ನು ಮತ್ತೆ ಜಾರಿಗೊಳಿಸಿದೆ.

ಹಾಗೂ ಅಮೆರಿಕದಲ್ಲಿಯೂ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ ಮತ್ತು ಓಹಿಯೋ ಸೇರಿದಂತೆ ಕೆಲವು ಪ್ರದೇಶಗಳಲ್ಲಿ NB.1.8.1 ರೂಪಾಂತರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ಹೀಗಾಗಿ ಸದ್ಯದ ಮಟ್ಟಿಗೆ ಕೆಲ ದೇಶಗಳ ಪ್ರಯಾಣವನ್ನು ಮುಂದೆ ಹಾಕುವುದು ಉತ್ತಮವಾಗಿದೆ.

Comments are closed.