ಎರಡನೇ ಮಹಡಿಯಿಂದ ಬೀಳುತ್ತಿದ್ದ ಕಾರ್ಮಿಕನನ್ನು ಕ್ಯಾಚ್ ಹಿಡಿದ ಗುತ್ತಿಗೆದಾರ, ವಿಡಿಯೋ ವೈರಲ್!

ಕೊಲ್ಲಂ: ಕೇರಳದ ಕೊಲ್ಲಂನಲ್ಲಿನ ನಿರ್ಮಾಣ ಹಂತದಮ ಮನೆಯೊಂದರ 2ನೇ ಮಹಡಿಯಿಂದ ತನ್ನ ಜತೆ ಕೆಲಸ ಮಾಡುತ್ತಿರುವ ಕಾರ್ಮಿಕ ಬೀಳುವುದನ್ನು ಗಮನಿಸಿದ ಗುತ್ತಿಗೆದಾರರೊಬ್ಬರು, ಬೀಳುತ್ತಿರುವ ಸಹೋದ್ಯೋಗಿಯನ್ನು ಕ್ಯಾಚ್ ಹಿಡಿದು ರಕ್ಷಿಸಿದ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ. ಬೀಳುತ್ತಿರುವ ಕಾರ್ಮಿಕನ ರಕ್ಷಿಸುವ ವಿಡಿಯೋ ದೃಶ್ಯಗಳು ಸಿಸಿಟಿವಿಯಲ್ಲಿ ಬಂಧಿಯಾಗಿದೆ.
ಕೊಲ್ಲಂನ ಶಂಕರ್ ಎಂಬ ಕಾರ್ಮಿಕ ಇತರ ನಾಲ್ವರೊಂದಿಗೆ 2ನೇ ಮಹಡಿಯಲ್ಲಿನ ಕಾಂಕ್ರೀಟ್ ಕಿಟಕಿಯ ಮೇಲ್ಟಾವಣಿ ಮೇಲೆ ಕೆಲಸ ಮಾಡುತ್ತಿದ್ದ. ಈ ವೇಳೆ ಆತ ಜಾರಿಬಿದ್ದಿದ್ದಾರೆ. ಈ ಸಮಯದಲ್ಲಿ ಕೆಳಗಡೆ ನಿಂತಿದ್ದ ಗುತ್ತಿಗೆದಾರ ಗಣೇಶ್ ಮಹಡಿ ಮೇಲಿನಿಂದ ಶಂಕರ್ ಬೀಳುತ್ತಿರುವುದು ಗಮನಿಸಿ ತನ್ನ ಎರಡು ಕೈಗಳಿಂದ ಕ್ಯಾಚ್ ಹಿಡಿದಿದ್ದಾರೆ. ಹೆಚ್ಚಿನ ಭಾರ ತಾಳಲಾರದೆ ಅವರು ನಿರ್ಮಾಣ ಸಾಮಗ್ರಿಗಳ ಜಾರಿದಂತೆ ಬಿದ್ದಿದ್ದಾರೆ. ಹಾಗಾಗಿ ಕಾರ್ಮಿಕ ಶಂಕರ್‌ಗೆ ಆಗುತ್ತಿದ್ದ ಹೆಚ್ಚಿನ ಅಪಾಯವನ್ನು ಗುತ್ತಿಗೆದಾರ ಗಣೇಶ್ ತಪ್ಪಿಸಿದ್ದಾರೆ.
ಈ ಮೊದಲೇ ಗಣೇಶ್ ಬೆನ್ನು ನೋವಿನಿಂದ ಬಳಲುತ್ತಿದ್ದರೂ, ತನ್ನ ಸಹೋದ್ಯೋಗಿಯ ರಕ್ಷಣೆಗೆ ಪ್ರಾಣದ ಹಂಗು ತೊರೆದು ಧಾವಿಸಿದ್ದು ಗಮನ ಸೆಳೆದಿದೆ. ಗುತ್ತಿಗೆದಾರ ಗಣೇಶ್ 25 ವರ್ಷಕ್ಕೂ ಹೆಚ್ಚು ಕಾಲದಿಂದ ನಿರ್ಮಾಣ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದು, ಕಾರ್ಮಿಕ ಶಂಕರ್ ಕೂಡ ಪ್ರಾರಂಭದಿಂದಲೂ (24 ವರ್ಷಗಳಿಂದಲೂ) ಗಣೇಶ್ ಜೊತೆ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಘಟನೆಯ ಕುರಿತು ಮಾತನಾಡಿದ ಗಣೇಶ್, ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬೇಕೋ ಹಾಗೇ ಮಾಡಿದೆ. ಅದೃಷ್ಟವಶಾತ್ ಶಂಕರ್ ಗಂಭೀರ ಅಪಾಯದಿಂದ ಪಾರಾಗಿರುವುದಕ್ಕೆ ಖುಷಿಯಾಗಿದೆ ಎಂದರು.
കൊല്ലം ജില്ലയിലെ പുനലൂരിൽ വീട് പണിയുന്നതിടെ രണ്ടാം നിലയിൽ നിന്നും കാൽവഴുതി വീണ തൊഴിലാളിയെ കോൺട്രാക്ടർ അതിസാഹസികമായി രക്ഷപ്പെടുത്തുന്നു pic.twitter.com/2VkXWLrdZO
— Subair B (@bavakuttysubair) May 29, 2025
Comments are closed.