Congress: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಳೆ ಬರಲ್ಲ ಎಂದವರಿಗೆ ಕಾಂಗ್ರೆಸ್ ತಿರುಗೇಟು: ಮಳೆ ಸಾಕ ಬೇಕಾ ಎಂದ ಕಾಂಗ್ರೆಸ್

Congress: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಳೆ ಬರುವುದಿಲ್ಲ ಎಂಬ ಹಲವು ವೈರಲ್ ಸಂದೇಶಗಳನ್ನು ನಾವು ನೋಡಿರುತ್ತೇವೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಮಳೆಯ ಕುರಿತಾದ ಪ್ರಜಾವಾಣಿ ಪತ್ರಿಕೆಯ ಸುದ್ದಿಯೊಂದನ್ನು ತಮ್ಮ X ನಲ್ಲಿ ಹಂಚಿಕೊಳ್ಳುತ್ತಾ ಮಳೆ ಸಾಕ ಬೇಕಾ ಎಂದು ಬರೆದುಕೊಂಡಿದೆ.

ಸಾಮಾನ್ಯವಾಗಿ ಪ್ರತಿ ವರ್ಷವೂ ಕೆ ಆರ್ ಎಸ್ ಜಲಾಶಯವು ಜೂನ್ ತಿಂಗಳಲ್ಲಿ 100 ಅಡಿ ತಲುಪುತ್ತದೆ, ಆದರೆ ಈ ಬಾರಿ ಮೇ ತಿಂಗಳಲ್ಲೇ ತಲುಪಿ 35 ವರ್ಷಗಳ ದಾಖಲೆ ಮುರಿದಿದೆ ಎಂದು ವರದಿಯಲ್ಲಿ ಬರೆದುಕೊಂಡಿದ್ದಾರೆ.
ಈ ಮೂಲಕ ತಾವು ನುಡಿದಂತೆ ನಡೆದಿದ್ದರಿಂದ ವರುಣ ದೇವನು ತಮಗೆ ಸಹಕಾರ ನೀಡಿದ್ದಾನೆ ಹಾಗೂ ಈಗಾಗಲೇ ಮಳೆಯ ಆರ್ಭಟಕ್ಕೆ ಅಗತ್ಯವಿರುವ ಸುರಕ್ಷತ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.
Comments are closed.