Sullia: ಸುಳ್ಯ: ಮಗುವಿನ ಸಾವಿನಿಂದ ಮನನೊಂದು ತಂದೆ ಆತ್ಮಹತ್ಯೆ!

Share the Article

Sullia: ಮಗುವಿನ ಸಾವಿನಿಂದ ಮನನೊಂದು ತಂದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಬಾಳಿಲದಲ್ಲಿ ನಡೆದಿದೆ.

ಬಾಳಿಲ ಬೊಮ್ಮಣ ಮಜಲು ಎಂಬಲ್ಲಿನ ನಿವಾಸಿ ಬಾಲಕೃಷ್ಣ (38) ಎಂಬವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಅವರ ಆರು ತಿಂಗಳ ಪುತ್ರಿ ಐದು ದಿನಗಳ ಹಿಂದೆ ಅನಾರೋಗ್ಯ ಕಾರಣದಿಂದ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿತ್ತು. ಮಗು ನಿಧನವಾದ ಹಿನ್ನೆಲೆ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದರು ಎನ್ನಲಾಗಿದೆ.

ಮೇ 28 ರಂದು ರಾತ್ರಿ ಮನೆ ಬಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ತಂದೆ , ತಾಯಿ , ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ .

Comments are closed.