Drushyam: ದೃಶ್ಯಮ್ ಸಿನಿಮಾದಂತೆ ಕೊಲೆ: ಪ್ರಿಯಕರನ ಜೊತೆ ಪರಾರಿ

Ahamadabad: ಇಲ್ಲೊಬ್ಬಳು ದೃಶ್ಯಮ್ ಚಿತ್ರ ನೋಡಿ ಪ್ರೇರೇಪಣೆಗೊಂದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದಾರೆ. ಹೌದು, ಪ್ರಿಯಕರನ ಜೊತೆ ಸೇರಿ ವ್ಯಕ್ತಿಯನ್ನು ಕೊಂದು ತನ್ನಂತೆ ಅಲಂಕರಿಸಿ ಸುತ್ತು ಹಾಕಿದ ಘಟನೆಯೊಂದು ಗುಜರಾತ್ ನ ಪಠಾಣ್ ಜಿಲ್ಲೆಯ ಜಖೋತ್ರ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಹರ್ಜಿ ಸೋಲಂಕಿ (56 ವರ್ಷ ) ಎಂದು ಗುರುತಿಸಲಾಗಿದೆ.

ವಿವಾಹಿತೆ ಗೀತ ಅಹಿರ್ ಭರತ್ ಎಂಬಾತನನ್ನು ಪ್ರೀತಿಸುತ್ತಿದ್ದು, ಗಂಡನಿಂದ ದೂರವಾಗಲು ಒಂದು ಭಯಂಕರ ಪ್ಲಾನ್ ಮಾಡಿದ್ದಾಳೆ. ಭರತ್ ಸೋಲಂಕಿಯನ್ನು ಡ್ರಾಪ್ ಕೊಡುವುದಾಗಿ ನಂಬಿಸಿ ಕರೆದೊಯ್ದಿದ್ದಾನೆ. ನಂತರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಉಸಿರುಗಟ್ಟಿಸಿ ಕೊಂದ ನಂತರ, ಅಲ್ಲಿಗೆ ಬಂದ ಗೀತ ತನ್ನ ಬಟ್ಟೆ ಒಡವೆಗಳನ್ನೆಲ್ಲ ಆ ಮೃತ ದೇಹಕ್ಕೆ ತೊಡಿಸಿ ಅದನ್ನು ಸುಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ.
ಆ ದೇಹ ಮಂಗಳವಾರ ಪತ್ತೆಯಾಗಿದ್ದು, ಮೊದಲು ಮಹಿಳೆಯ ದೇಹ ಎಂದು ಎಲ್ಲರೂ ನಂಬಿದ್ದು, ಪೊಲೀಸ್ ತನಿಖೆಯ ನಂತರ ಅದು ಪುರುಷನದ್ದು ಎಂದು ಬಯಲಾಗಿದೆ. ನಂತರ ಆರೋಪಿಗಳಿಗೆ ಬಲೆ ಬೀಸಿದ ಪೊಲೀಸರಿಗೆ ಪಾಲನ್ಪುರ ರೈಲು ನಿಲ್ದಾಣದಲ್ಲಿ ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದು, ದೃಶ್ಯಮ್ ಚಿತ್ರದ ರೀತಿ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿರುತ್ತಾರೆ.
Comments are closed.