Maja Talkies : ಕೊನೆಗೊಳ್ಳುತ್ತಿದೆ ‘ಮಜಾ ಟಾಕೀಸ್’ – ಈ ವಾರ ಫಿನಾಲೆ ವಿಕ್

Maja Talkies : ಕನ್ನಡದಲ್ಲಿ ಹಲವು ನಕ್ಕು ನಗಿಸುವಂತಹ ಕಾರ್ಯಕ್ರಮಗಳು, ಫ್ಯಾಮಿಲಿ ಶೋಗಳು, ರಿಯಾಲಿಟಿ ಶೋಗಳು ಬಂದಿವೆ. ಬರುತ್ತಲೂ ಇವೆ. ಆದರೆ ಮಜಾ ಟಾಕೀಸ್(Maja Talkies ) ಲೆವಲ್ ಅನ್ನು ಮೀರಿಸುವಂತಹ ಯಾವ ಶೋಗಳು ಕೂಡ ಇದುವರೆಗೂ ಬಂದಿಲ್ಲ. ಬಹುಶ ಬರುವುದು ಇಲ್ಲ. ಸುಮಾರು ದಶಕದ ಸಮಯ ಕನ್ನಡ ನಾಡಿನ ಜನರನ್ನು ನಕ್ಕು ನಗಿಸಿ ಎಲ್ಲರ ಮನೆ ಮಾತಾಗಿದ್ದ ಈ ಶೋ ಒಂದೆರಡು ವರ್ಷಗಳಿಂದ ಕಾರಣಾಂತರಗಳಿಂದ ಪ್ರಸಾರವಾಗಿರಲಿಲ್ಲ. ಆದರೆ ಕಳೆದ ಜನವರಿಯಲ್ಲಿ ಇದು ಮತ್ತೆ ಆರಂಭವಾಗಿತ್ತು. ಜನವರಿಯಲ್ಲಿ ಆರಂಭವಾದ ಈ ಶೋ ‘ಮಜಾ ಟಾಕೀಸ್’ ಶೋ ಆರಂಭ ಆಗಿತ್ತು. ಈಗ ಈ ಶೋ ಕೊನೆ ಆಗುತ್ತಿದೆ.

ಹೌದು, ಮಜಾ ಟಾಕೀಸ್ ಕೊನೆಯಾಗುತ್ತಿರುವ ಕುರಿತು ವಾಹಿನಿ ಕಡೆಯಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಈ ವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ ಎಂದು ವಾಹಿನಿಯವರು ಮಾಹಿತಿ ನೀಡಿದ್ದಾರೆ.
‘ಮಜಾ ಟಾಕೀಸ್’ ಶೋನ ನೇತೃತ್ವನ್ನು ಸೃಜನ್ ಲೋಕೇಶ್ ಅವರು ವಹಿಸಿಕೊಂಡಿದ್ದಾರೆ. ಯೋಗರಾಜ್ ಭಟ್ ಅವರು ವಿಶೇಷ ಸ್ಥಾನ ಅಲಂಕರಿಸಿದ್ದರು. ಕುರಿ ಪ್ರತಾಪ್ ಸೇರಿದಂತೆ ಅನೇಕ ಕಲಾವಿದರು ಈ ಬಾರಿಯ ಮಜಾ ಮನೆಯಲ್ಲಿ ಇದ್ದರು. ಇಷ್ಟು ವಾರಗಳ ಕಾಲ ಶೋ ಪ್ರಸಾರ ಕಂಡಿತ್ತು.
ಅಂದಹಾಗೆ ‘ಮಜಾ ಟಾಕೀಸ್’ ಶೋನಲ್ಲಿ ಈ ವಾರ ದೊಡ್ಡಣ್ಣ, ಚಿಕ್ಕಣ್ಣ ಇಬ್ಬರೂ ಅತಿಥಿಗಳಾಗಿ ಆಗಮಿಸಿದ್ದಾರೆ. ಅವರು ಪ್ರೇಕ್ಷಕರನ್ನು ರಂಜಿಸೋ ಕೆಲಸ ಮಾಡಲಿದ್ದಾರೆ. ಕೆಲವು ಫನ್ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದ್ದಾರೆ. ಈ ಪೋಸ್ಟರ್ಗೆ ‘ಮಜಾ ಟಾಕೀಸ್ ಗ್ರಾಂಡ್ ಫಿನಾಲೆ ಎನ್ನುವ ಕ್ಯಾಪ್ಶನ್ ಕೊಡಲಾಗಿದೆ. ಅಂದರೆ ಈ ಶೋ ಪೂರ್ಣಗೊಳ್ಳೋದು ಖಚಿತವಾಗಿದೆ.
Comments are closed.