Lottery: ಕೇರಳದ ವ್ಯಕ್ತಿಗೆ ಒಲಿದ ಅದೃಷ್ಟ ಲಕ್ಷ್ಮೀ: ಒಂದಲ್ಲ ಎರಡೆರಡು ಬಾರಿ

Share the Article

Kerala: ಒಂದು ಬಾರಿ ಲಾಟರಿ ಹೊಡೆಯುವುದೇ ಕಷ್ಟ, ಎಷ್ಟೋ ಜನರು ಲಾಟರಿ ಮೇಲೆ ಹಣ ಸುರಿದು ಕೈ ಖಾಲಿ ಮಾಡಿಕೊಳ್ಳುವುದುಂಟು. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿಗೆ ಮೇಲಿಂದ ಮೇಲೆ ಲಾಟರಿ ಹೊಡೆದಿದೆ. ಹೌದು, ಕೇರಳ ಮೂಲದ ದುಬೈ ನಲ್ಲಿ ವಾಸಿಸುತ್ತಿರುವ 60 ವರ್ಷದ ಪಾಲ್ ಜೋಸ್ ಮಾವೇಲಿ ಎಂಬ ವ್ಯಕ್ತಿಗೆ ಇದೀಗ ಎರಡು ಬಾರಿ ಲಾಟರಿ ಹೊಡೆದಿದೆ.

ಮೊದಲು ಇವರಿಗೆ 8.5 ಕೋಟಿಯ ಲಾಟರಿ ಹೊಡೆದಿದ್ದು, ನಂತರ ದುಬೈನಲ್ಲಿ ಪ್ರಸಿದ್ಧವಾಗಿರುವ ದುಬೈ ಡ್ಯೂಟಿ-ಫ್ರೀ ಮಿಲೇನಿಯಮ್ ಮಿಲಿಯನೇರ್ ಸ್ಪರ್ಧೇಯಲ್ಲಿ 1 ಮಿಲಿಯನ್ ಡಾಲರ್ ಮೊತ್ತದ ಲಾಟರಿ ಜಾಕ್‌ಪಾಟ್ ಹೊಡೆದಿದೆ. ಇದು ಮೊದಲೇನಲ್ಲ, 10 ವರ್ಷದ ಒಳಗೆ ಈ ವ್ಯಕ್ತಿಗೆ ಇಲ್ಲಿ 2 ನೆ ಬಾರಿ ಲಾಟರಿ ಹೊಡೆದಿರುವುದಾಗಿದೆ.

ಈ ಕುರಿತಾಗಿ ಲಾಟರಿ ಸಂಸ್ಥೆಯು ಮಾವೇಲಿಗೆ ತನ್ನ ಇನ್ಸ್ಟಗ್ರಾಮ್ ಖಾತೆ ಮೂಲಕ ಅಭಿನಂದನೆಗಳನ್ನು ಬರೆದುಕೊಂಡಿದೆ. ಇದೀಗ ಈ ವಿಷಯ ಬಾರಿ ವೈರಲ್ ಆಗುತ್ತಿದ್ದು,ಮಾವೇಲಿ ಯನ್ನು ಲಕ್ಷ್ಮಿ ಪುತ್ರ ಎಂದು ನೆಟ್ಟಿಗರು ಕಾಮೆಂಟ್ ಹಾಕುತ್ತಿದ್ದಾರೆ.

Comments are closed.