Pakistan : “ನಾವು ನಮಾಜ್‌ ಮುಗಿಸಿ ದಾಳಿ ಮಾಡ್ಬೇಕು ಅನ್ನುವಷ್ಟರಲ್ಲಿ ಭಾರತವೇ ನುಗ್ಗಿ ಹೊಡೆದುಬಿಡ್ತು” – ಪಾಕ್ ಪ್ರಧಾನಿ ಶೆಹಬಾಜ್‌ ಹೇಳಿಕೆ

Share the Article

Pakistan : ‘ಪಾಕಿಸ್ತಾನದ ಯೋಜಿತ ಪ್ರತಿಕ್ರಿಯೆಗೂ ಮುನ್ನ ಭಾರತ ಬ್ರಹ್ಮೋಸ್ ವಾಯುನೆಲೆಗಳ ಮೇಲೆ ದಾಳಿ ಮಾಡಿದೆ’ ಎಂದು ಇದೀಗ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಒಪ್ಪಿಕೊಂಡಿದ್ದಾರೆ.

ಹೌದು, ‘ನಾವು ಮೇ 10ರಂದು ಬೆಳಗಿನ ಪ್ರಾರ್ಥನೆ (ನಮಾಜ್‌) ಮುಗಿಸಿ ಭಾರತದ ಮೇಲೆ ದಾಳಿ ಮಾಡಬೇಕು ಎಂದುಕೊಂಡಿದ್ದೆವು. ಆದರೆ ಭಾರತ ಅದಕ್ಕೂ ಮೊದಲೇ ನಮ್ಮ ಮೇಲೆ ಬ್ರಹ್ಮೋಸ್‌ ಕ್ಷಿಪಣಿ ಹಾರಿಸಿ ವಾಯುನೆಲೆಗಳನ್ನು ಧ್ವಂಸ ಮಾಡಿತು’ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಹೇಳಿದ್ದಾರೆ.

ಅಜೆರ್ಬೈಜಾನ್‌ನ ಲಾಚಿನ್‌ನಲ್ಲಿ ಮಾಡಿದ ಭಾಷಣದಲ್ಲಿ ಶರೀಪ್ ಅವರು ‘ಭಾರತದ ದಾಳಿಗೆ (ಆಪರೇಷನ್‌ ಸಿಂದೂರ) ಸೂಕ್ತ ತಿರುಗೇಟು ನೀಡಲು ನಾವು ನಿರ್ಧರಿಸಿದ್ದೆವು. ಅದರಂತೆ ಮೇ 10ರಂದು ಬೆಳಗಿನ ಪ್ರಾರ್ಥನೆ ಮುಗಿಸಿ ಮುಂಜಾನೆ 4.30ರ ವೇಳೆಗೆ ಯೋಜಿತ ದಾಳಿ ನಡೆಸಿ ಶತ್ರು ದೇಶಕ್ಕೆ ಪಾಠ ಕಲಿಸಲು ಸಜ್ಜಾಗಿದ್ದೆವು. ಆದರೆ ಅದಕ್ಕೆ ಒಂದು ಗಂಟೆ ಮುಂಚೆಯೇ ಭಾರತವು ನಮ್ಮ ದೇಶದ ಹಲವು ಪ್ರದೇಶಗಳ ಮೇಲೆ ದಾಳಿ ನಡೆಸಿತು. ಅವರು ಬ್ರಹ್ಮೋಸ್‌ ಕ್ಷಿಪಣಿ ಬಳಸಿ ರಾವಲ್ಪಿಂಡಿ ಸೇರಿದಂತೆ ನಮ್ಮ ಹಲವು ಪ್ರದೇಶಗಳ ಮೇಲೆ ದಾಳಿ ನಡೆಸಿದರು. ಈ ಬಗ್ಗೆ ಅಸೀಂ ಮುನೀರ್‌ ನನಗೆ ತಿಳಿಸಿದರು’ ಎಂದು ಹೇಳಿದ್ದಾರೆ

Comments are closed.