How to get Thick Hair: ಕೂದಲನ್ನು ದಪ್ಪ ಹಾಗೂ ಬಲಪಡಿಸಲು ಇಲ್ಲಿದೆ ಸುಲಭ ಪರಿಹಾರ

How to get Thick Hair: ಭೃಂಗರಾಜ ಎಣ್ಣೆಯು ಕೂದಲನ್ನು ಬಲಗೊಳಿಸುವ ಜೊತೆಗೆ, ಇದು ಕೂದಲು ಉದುರುವಿಕೆಯನ್ನು ಕೂಡ ಕಡಿಮೆ ಮಾಡುತ್ತದೆ. ಇನ್ನು ಹಿಂದಿನಿಂದಲೂ ಸಾಂಪ್ರಾದಾಯಿಕವಾಗಿ ಬಳಸುತ್ತಿರುವ ತೆಂಗಿನ ಎಣ್ಣೆ ಕೂಡಾ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು, ತೆಂಗಿನ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಬಹುದು ಹಾಗೂ ಇದು ತಲೆಯ ಚರ್ಮದ ಮೇಲೆ ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ.
ಇನ್ನು ಮೊಟ್ಟೆ ಬಳಸುವುದರಿಂದ ಅದು ಸಾಕಷ್ಟು ಪೋಷಣೆ ಮತ್ತು ಪ್ರೋಟೀನ್ ಅನ್ನು ಒದಗಿಸುತ್ತದೆ,ಮತ್ತು ಕೂದಲು ಉದುರುವುದನ್ನು ನಿಯಂತ್ರಿಸುತ್ತದೆ ಮತ್ತು ಕೂದಲನ್ನು ದಪ್ಪವಾಗಿಸುತ್ತದೆ. ಇನ್ನೂ ಮೆಂತ್ಯೆ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು, ಬೀಜಗಳನ್ನು ನುಣ್ಣಗೆ ಪುಡಿಮಾಡಿ ಪೇಸ್ಟ್ ಮಾಡಿ ಹಚ್ಚುವುದರಿಂದ ಕೂದಲು ಉದುರುವಿಕೆಯನ್ನು ಕಡಿಮೆಯಾಗಿ ಕೂದಲು ಬಲವಾಗುತ್ತವೆ.
ಹಾಗೂ ಅಲೋವೆರಾ ಬಳಕೆಯಿಂದ ಆರೋಗ್ಯ ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗುವುದರ ಜೊತೆಗೆ, ಕೂದಲಿಗೆ ಸಹ ಪ್ರಯೋಜನಕಾರಿಯಾಗಿದೆ. ಇದು ಕೂದಲನ್ನು ಬಲವಾಗಿ ಮತ್ತು ಬೇರುಗಳಿಂದ ದಪ್ಪವಾಗಿಸುತ್ತದೆ ಹಾಗೂ ಅಲೋವೆರಾ ಮಾಯಿಶ್ಚರೈಸಿಂಗ್ ಗುಣಗಳನ್ನು ಹೊಂದಿದ್ದು, ಇದು ಕೂದಲಿಗೆ ತೇವಾಂಶವನ್ನು ಒದಗಿಸುತ್ತದೆ.
Comments are closed.