Tirupati Timmappa: ತಿರುಪತಿ ತಿಮ್ಮಪ್ಪನ ದರ್ಶನ ಪಡೆಯೋ ಭಕ್ತರಿಗೆ ಇಲ್ಲಿದೆ ಒಂದು ಎಚ್ಚರಿಕೆ

Share the Article

Tirupati :ಈಗಾಗಲೇ ಪರೀಕ್ಷೆಗಳು ಮುಗಿದು ಮಕ್ಕಳಿಗೆ ಬೇಸಿಗೆ ರಜೆ ನೀಡಿದ್ದು, ಇನ್ನು ಕೆಲವರಿಗೆ ಶಾಲೆಯು ಮರು ಪ್ರಾರಂಭ ಆಗಿದೆ. ಈ ನಿಟ್ಟಿನಲ್ಲಿ ತಿರುಒಅತಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ವಾರಾಂತ್ಯದಲ್ಲಂತೂ ಬಹಳಷ್ಟು ಏರಿಕೆ ಕಂಡು ಬರುತ್ತಿದೆ. ಇನ್ನು ಟೋಕನ್ ಇಲ್ಲದೆ ಬರುವವರಂತೂ 24 ಗಂಟೆಗಳು ಕಾದು ದರ್ಶನ ಮಾಡುತ್ತಿದ್ದಾರೆ.

ವಾರಾಂತ್ಯದಲ್ಲಿ ಸುಮಾರು 90 ಸಾವಿರದಷ್ಟು ಜನ ಬಂದರೆ, ಬೇರೆ ದಿನಗಳಲ್ಲಿ ಬರುವವರ ಸಂಖ್ಯೆ 70-80 ಸಾವಿರದಷ್ಟಿದೆ. ಈ ಗುರುವಾರ ಒಂದೇ ದಿನ 69,019 ಭಕ್ತರು ಸ್ವಾಮಿಯ ದರ್ಶನ ಪಡೆದಿದ್ದು, 37,774 ಭಕ್ತರು ಮುಡಿ ಕೊಟ್ಟು ಹರಕೆ ತೀರಿಸಿದ್ದಾರೆ. ಇನ್ನೂ ಒಂದೇ ದಿನ 3.42 ಕೋಟಿ ಕಾಣಿಕೆ ಬಂದಿದ್ದು, ಸುಲಭ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಕ್ತರ ಸಂಖ್ಯೆ ಹೆಚ್ಚಿರುವುದರಿಂದ ವೈಕುಂಠಂ ಕ್ಯೂ ಕಾಂಪ್ಲೆಕ್ಸ್-2, ನಾರಾಯಣಗಿರಿ ಶೆಡ್‌ಗಳು, ಎಟಿಸಿ, ಟಿಬಿಸಿ, ಎಟಿಜಿಹೆಚ್, ಕೃಷ್ಣತೇಜ ಅತಿಥಿಗೃಹದವರೆಗೂ ಸಾಲು ಉಳಿದುಕೊಂಡಿದ್ದು, ಶಿಲಾ ತೋರಣದವರೆಗೂ ಕ್ಯೂನಲ್ಲಿ 15 ಹೊಸ ಊಟದ ಕೌಂಟರ್‌ಗಳನ್ನು ತೆರೆದು, ಭಕ್ತರಿಗೆ ಅನ್ನಪ್ರಸಾದ ನೀಡಲಾಗುತ್ತಿದೆ.

Comments are closed.