Rainy season: ಮಳೆಗಾಲದಲ್ಲಿ ಬಟ್ಟೆ ಒಣಗಲ್ವಾ: ಇಲ್ಲಿದೆ ನೋಡಿ ಸುಲಭ ಪರಿಹಾರ

Share the Article

Rainy season: ಮಳೆಗಾಲದಲ್ಲಿ ಬಟ್ಟೆ ಒಣಗಿಸೋದು ಎಲ್ಲರಿಗೂ ತಲೆನೋವಿನ ವಿಷಯವಾಗಿದ್ದು, ಮಳೆಗಾಲದಲ್ಲಿ ಇದೊಂದು ಸವಾಲಾಗಿ ಪರಿಣಮಿಸುತ್ತದೆ.

ಹೌದು, ಮಳೆಗಾಲದಲ್ಲಿ ಬಟ್ಟೆ ಒಣಗೋಕೆ ಸಮಯ ಬಹಳಷ್ಟು ತೆಗೆದುಕೊಳ್ಳುವುದಲ್ಲದೆ, ಹಸಿ ವಾಸನೆ ಜೊತೆಗೆ ಇದರಿಂದ ಅದರಲ್ಲಿ ಕೀಟಾಣುಗಳು ಕೂಡ ಉತ್ಪತ್ತಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಬಟ್ಟೆ ಒಣಗಿಸಲು ಕೆಲವೊಂದು ಸುಲಭ ವಿಧಾನಗಳನ್ನು ನಾವು ಬಳಸುವ ಮೂಲಕ ಬೇಗ ಒಣಗಿಸಬಹುದಾಗಿದೆ.

ಹ್ಯಾಂಗರ್ ಗಳನ್ನು ಬಳಸುವ ಮೂಲಕ ಗಾಳಿಯಿರುವ ಕೋಣೆಯಲ್ಲಿ ಅಥವಾ ಫ್ಯಾನ್ ನ ಮುಂಭಾಗದಲ್ಲಿ ನೇತು ಹಾಕುವುದರಿಂದ ಬೇಗ ಒಣಗುತ್ತದೆ. ಹಾಗೂ ಬಟ್ಟೆಗಳನ್ನು ಚೆನ್ನಾಗಿ ಹಿಂಡಿ ನಂತರ ಒಣಗಿಸಿದರೆ ಒಣಗಲು ಕಡಿಮೆ ಸಮಯ ಹಿಡಿಯುತ್ತದೆ. ಹೀಟರ್ ಅಥವಾ ಫ್ಯಾನ್ ಗಾಳಿಯಿಂದ ಬೇಗ ಒಣಗಿಸಬಹುದಾಗಿದೆ.

ಇನ್ನೊಂದು ಸುಲಭದ ವಿಧಾನವೆಂದರೆ ಹೇರ್ ಡ್ರೈಯರ್ ಇದನ್ನು ಬಳಸುವ ಮೂಲಕ ಬೇಗ ಬಟ್ಟೆಗಳನ್ನು ಒಣಗಿಸಬಹುದು. ಬಟ್ಟೆಯಿಂದ ಸ್ವಲ್ಪ ದೂರದಲ್ಲಿ ಇಟ್ಟುಕೊಂಡು ಒಣಗಿಸಬೇಕು ಹಾಗೂ ಇದು ಒದ್ದೆ ಬಟ್ಟೆಯನ್ನು ಒಣಗಿಸಲು ಸುಮಾರು 6 ಗಂಟೆಗಳ ಕಾಲ ಸಮಯವನ್ನು ತೆಗೆದುಕೊಳ್ಳುತ್ತದೆ. ಈ ರೀತಿಯಾದ ಹಲವಾರು ವಿಧಾನಗಳಿಂದ ಬಟ್ಟೆಗಳನ್ನು ಒಣಗಿಸಿಕೊಳ್ಳಬಹುದಾಗಿದೆ.

Comments are closed.