Facebook : ಫೇಸ್ಬುಕ್ ಸ್ನೇಹಿತನನ್ನು ನಂಬಿ ಊಟಕ್ಕೆ ಹೋದ ಯುವತಿ – ಮನೆಗೆ ಹೋದ ಬಳಿಕ ಕಾದಿತ್ತು ಬಿಗ್ ಶಾಕ್ !!

Facebook: ಫೇಸ್ಬುಕ್ ನಲ್ಲಿ ಪರಿಚಯನಾದ ಗೆಳೆಯ ತನ್ನ ಮನೆಗೆ ಊಟಕ್ಕೆ ಕರೆದೆನೆಂದು ಯುವತಿಯೊಬ್ಬಳು ಆತನ ಮನೆಗೆ ಹೋಗಿದ್ದಾಳೆ. ಆದರೆ ಪಾಪಿ ಗೆಳೆಯ ಯುವತಿಗೆ ಊಟದಲ್ಲಿ ಮಾದಕ ದ್ರವ್ಯ ಬೆರೆಸಿ ಕೊಟ್ಟು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಹೌದು, ಹೈದರಾಬಾದ್ನ ಬಂಜಾರ ಹಿಲ್ಸ್ ಯ ನಿವಾಸಿ ಮಹೇಂದ್ರವರ್ಧನ್ ಎಂಬ ಯುವಕ ಫೇಸ್ಬುಕ್ನಲ್ಲಿ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡು, ತನ್ನನ್ನು ತಾನು ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂದು ಪರಿಚಯಿಸಿಕೊಂಡ. ನಂತರ ಇಬ್ಬರು ಪರಿಚಯ ಆಳವಾಯಿತು. ಬಳಿಕ ಮಹೇಂದ್ರವರ್ಧನ್ ಯುವತಿಯನ್ನು ತನ್ನ ಮನೆಗೆ ಊಟಕ್ಕೆ ಕರೆದಿದ್ದಾನೆ.
ಈ ವೇಳೆ ಊಟದಲ್ಲಿ ಮಾದಕ ದ್ರವ್ಯವನ್ನು ಬೆರೆಸಿ, ಆಕೆಗೆ ನೀಡಿದ್ದಾನೆ. ಅದನ್ನು ಸೇವಿಸಿದ ಸಂತ್ರಸ್ತೆ ತಕ್ಷಣ ನಿದ್ರೆಗೆ ಜಾರಿದ್ದು,ಅದೇ ಸಮಯದಲ್ಲಿ, ಆತ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದನು. ನಿದ್ರೆಯಿಂದ ಎಚ್ಚರಗೊಂಡಾಗ ತನ್ನ ಸ್ಥಿತಿಯನ್ನು ನೋಡಿ ಸಂತ್ರಸ್ತೆ ಆಘಾತಕ್ಕೆ ಒಳಗಾದಳು. ಈ ವೇಳೆ ಮಹೇಂದ್ರ, ಫೋಟೋ ಮತ್ತು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ. ಕೆಲ ಸಮಯದಿಂದ ಫೋಟೋ ಮತ್ತು ವಿಡಿಯೋ ತೋರಿಸಿ, ಆಕೆಗೆ ಮಹೇಂದ್ರ ಬ್ಲ್ಯಾಕ್ಮೇಲ್ ಮಾಡುತ್ತಿದ್ದ.
ಇದಕ್ಕೆ ಪ್ರತಿಯಾಗಿ ಆಕೆ 20 ಲಕ್ಷ ರೂ.ವರೆಗೆ ಹಣ ನೀಡಿದ್ದಳು. ಆದರೆ, ಆರೋಪಿಯ ಕಿರುಕುಳ ದಿನೇ ದಿನೇ ಹೆಚ್ಚಾಯಿತು. ಹಣ ಕೊಡದಿದ್ದರೆ ಫೋಟೋ ಮತ್ತು ವಿಡಿಯೋಗಳನ್ನು ಬಹಿರಂಗಪಡಿಸುತ್ತೇನೆ ಎಂದು ಹೇಳಿ ಇತ್ತೀಚೆಗೆ 1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ. ಆರೋಪಿಯ ಕಿರುಕುಳ ತಾಳಲಾರದೇ ಸಂತ್ರಸ್ತೆ, ಬಂಜಾರ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 64(1), 308(2), 351(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Comments are closed.