Belthangady: ಆಕಾಶವಾಣಿ ಕೇಂದ್ರದ ಸೂರ್ಯನಾರಾಯಣ ಭಟ್ಟರಿಗೆ ಸನ್ಮಾನ

Belthangady: ಈ ತಿಂಗಳ ಅಂತ್ಯದಲ್ಲಿ ನಿವೃತ್ತರಾಗಲಿರುವ ಮಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರಾದ ಪಿ. ಎಸ್ ಸೂರ್ಯನಾರಾಯಣ ಭಟ್ ಇವರನ್ನು ಶ್ರೀಮದವೂರ ವಿಶ್ಲೇಶ ಕಲಾ ಸಂಘ ಗೇರುಕಟ್ಟೆ ವತಿಯಿಂದ ಆಕಾಶವಾಣಿ ಕೇಂದ್ರದಲ್ಲಿ ಸನ್ಮಾನಿಸಲಾಯಿತು.

ಕ್ರಿಯಾಶೀಲ ವ್ಯಕ್ತಿತ್ವದ ಸೂರ್ಯನಾರಾಯಣ ಭಟ್ಟರು ಕಾವ್ಯಯಾನ, ಕಥಾಮೃತ, ಕೃಷಿರಂಗ, ತುಳು- ಕನ್ನಡ ಸಂದರ್ಶನ, ಯಕ್ಷ ಸಿರಿ, ಯಕ್ಷಗಾನ ತಾಳಮದ್ದಳೆ ಸಂಯೋಜನೆಯ ಮೂಲಕ ಬಾನುಲಿ ಕಾರ್ಯಕ್ರಮಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ವಿಷ್ಟೇಶ ಕಲಾ ಸಂಘದ ಅಧ್ಯಕ್ಷ ಪ್ರೊ. ಮಧೂರು ಮೋಹನ ಕಲ್ಲೂರಾಯ ತಿಳಿಸಿದರು.
Comments are closed.