MP: ಲಿಫ್ಟ್ ನಲ್ಲಿ ಸಿಲುಕಿದ ಮಗ – ಹಾರ್ಟ್ ಅಟ್ಯಾಕ್ ಆಗಿ ಪ್ರಾಣಬಿಟ್ಟ ಅಪ್ಪ!!

MP: ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ಘನಘೋರ ದುರಂತ ಸಂಭವಿಸಿದ್ದು, ಲಿಫ್ಟ್ ನಲ್ಲಿ ಮಗ ಸಿಲುಕಿದ್ದಕ್ಕೆ ಗಾಬರಿಗೊಂಡ ತಂದೆ ಹೃದಯಘಾತಗೊಂಡು ಪ್ರಾಣಬಿಟ್ಟಿದ್ದಾರೆ.

ಹೌದು, ಭೋಪಾಲ್ ನ ಹೊಸಂಗಬಾದ್ ನ ರಾಯಲ್ ವಿಲ್ಲಾ ಅಪಾರ್ಟ್ಮೆಂಟ್ ನಲ್ಲಿ ದುರಂತ ನಡೆದಿದೆ. ಇಲ್ಲಿನ ರಿಶಿರಾಜ್ ಎಂಬುವವರು ಪುತ್ರ ದೇವಾoಶ್ ಜತೆಯಲ್ಲಿ ನಡೆದು ಹೋಗುತ್ತಿದ್ದರು. ಈ ವೇಳೆ ಲಿಫ್ಟ್ ನಲ್ಲಿ ಮನೆಗೆ ಹೋಗೋಣ ಎಂದು ರಿಶಿರಾಜ್ ಹೇಳಿದರು. ತಕ್ಷಣ ಒಳಗೆ ಹೋದ ದೇವಾoಶ್, ಅಪ್ಪನನ್ನು ಕರೆದಿದ್ದಾನೆ. ಆದ್ರೆ ಅಷ್ಟರಲ್ಲಿ ಕರೆಂಟ್ ಆಫ್ ಆಗಿ ಲಿಫ್ಟ್ ಲಾಕ್ ಆಗಿದೆ.
ಒಳಗಿನಿಂದ ಅಪ್ಪ ಅಪ್ಪ ಎಂದು ದೇವಾoಶ್ ಕೂಗಿದ್ದಾನೆ. ಇಷ್ಟರಲ್ಲಿ ಗಾಬರಿಯಾದ ರಿಶಿರಾಜ್ ಜನರೇಟರ್ ರೂಮ್ ಗೆ ಹೋಗಿದ್ದಾರೆ. ಆದ್ರೆ ಮಗ ಸಿಲುಕಿದ ಅನ್ನೋ ಭಯಕ್ಕೆ ರಿಶಿರಾಜ್ ಗೆ ಹಾರ್ಟ್ ಅಟ್ಯಾಕ್ ಆಗಿದೆ. ಆಸ್ಪತ್ರೆಗೆ ಸಾಗಿಸಿದ್ರೂ ರಿಶಿರಾಜ್ ಸಾವನಾಪ್ಪಿದ್ದಾರೆ. ಆದ್ರೆ 3 ನಿಮಿಷದಲ್ಲಿ ಪವರ್ ರಿಷ್ಟೋರ್ ಆಗಿದ್ದು, ದೇವಾoಶ್ ಸುರಕ್ಷಿತವಾಗಿ ಆಚೆ ಬಂದಿದ್ದಾನೆ.
Comments are closed.